ಪಶ್ಚಿಮ ಬರ್ಧಮನ್:ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮನ್ ಜಿಲ್ಲೆಯ ಅಲ್ಲಾಸಿ ಗ್ರಾಮದ ಬುಡಕಟ್ಟು ಯುವಕರನ್ನು ‘ಕಡಕ್ನಾಥ್’ ಕೋಳಿ ಸಾಕಣೆಯಲ್ಲಿ ತೊಡಗಿಸುವ ಮೂಲಕ ರಾಜ್ಯ ಸರ್ಕಾರವು ಅವರ ಜೀವನೋಪಾಯದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ.
ಬುಡಕಟ್ಟು ಯುವಕರ ಬದುಕು ಬದಲಿಸಿದ 'ಕಡಕ್ನಾಥ್' ಕೋಳಿ ಉದ್ಯಮ - ಕಡಕ್ನಾಥ್ ಕೋಳಿ ಸಾಕಾಣಿಕೆಯಿಂದ ಆದಾಯ ಹೆಚ್ಚಳ
ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಬುಡಕಟ್ಟು ಜನಾಂಗ ಕ್ಷೇಯೋಭಿವೃದ್ಧಿಗಾಗಿ ‘ಕಡಕ್ನಾಥ್’ ಕೋಳಿ ಸಾಕಣೆ ಬಗ್ಗೆ ತರಬೇತಿ ನೀಡಿತು.ಇದೀಗಬುಡಕಟ್ಟು ಜನಾಂಗದವರು ಕೋಳಿ ಸಾಕಣೆಯನ್ನ ಜೀವಾನಾಧಾರವಾಗಿರಿಸಿಕೊಂಡು ಯಶಸ್ಸು ಕಂಡಿದ್ದಾರೆ.
ರೈತರ ಜೀವನದಲ್ಲಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಯುವಕರ ಬಾಳಿನಲ್ಲಿ ಉತ್ತಮ ಬದಲಾವಣೆಗಳನ್ನು ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಜಂಟಿಯಾಗಿ ‘ಕಡಕ್ನಾಥ್’ ಕೋಳಿ ಸಾಕಣೆ ಬಗ್ಗೆ ತಾಂತ್ರಿಕ ಜ್ಞಾನವನ್ನು ನೀಡುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು. ಇಲ್ಲಿ ತರಬೇತಿ ಪಡೆದ ಬುಡಕಟ್ಟು ಜನಾಂಗದ ಯುವಕರು ಜಮೀನಿನಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ವಸ್ತುಗಳಿಂದ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕಡಕ್ನಾಥ್ 300 ಕೋಳಿ ಮರಿಗಳನ್ನು ಸಾಕಲು ಪ್ರಾರಂಭಿಸಿದರು. ಈಗ ಇದೇ ಕೋಳಿ ಸಾಕಣೆ ಅವರು ಜೀವನದ ದಿಕ್ಕನ್ನೇ ಬದಲಿಸಿದ್ದು, ವಾರ್ಷಿಕವಾಗಿ ಸುಮಾರು 3 ಲಕ್ಷ ರೂ.ಗಳವರೆಗೆ ಆದಾಯ ಗಳಿಸುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಯುವ ಉದ್ಯಮಿಯೊಬ್ಬರು, ಈ ಕೋಳಿ ಸಾಕಣೆ ತಮ್ಮ ಕೈ ಹಿಡಿದಿದ್ದು, ಅವುಗಳನ್ನು ಸಾಕಲು ತೆರೆದ ಶೆಡ್ವೊಂದನ್ನು ನಿರ್ಮಿಸಿದ್ದೇವೆ ಕೋಳಿಗಳು ಎಲ್ಲೇ ಅಲೆದಾಡುತ್ತಿದ್ದರೂ, ನಿಗದಿತ ಸಮಯ ಮತ್ತು ಸ್ಥಳಕ್ಕೆ ಮತ್ತೆ ಮರಳುತ್ತವೆ. ಈ ‘ಕಡಕ್ನಾಥ್’ ಕೋಳಿ ಸಾಕಣೆಯಿಂದ ನಾವು ಹೆಚ್ಚು ಆದಾಯ ಗಳಿಸುತ್ತಿದ್ದೇವೆ ಎಂದು ತಿಳಿಸಿದ್ರು.