ಕರ್ನಾಟಕ

karnataka

ETV Bharat / bharat

ಎಣ್ಣೆ ಪ್ರಿಯರಿಗೆ 'ಮಮತೆ'ಯ ಆದೇಶ: ಇಂದಿನಿಂದಲೇ ಮದ್ಯ ಮಾರಾಟಕ್ಕೆ ಅವಕಾಶ

ದೇಶದಲ್ಲಿ ಲಾಕ್​ಡೌನ್​ ಹೇರಿರುವ ಕಾರಣ ಎಣ್ಣೆ ಪ್ರಿಯರು ಅನುಭವಿಸುತ್ತಿರುವ ಪಡಿಪಾಟಲು ಹೇಳತೀರದಾಗಿದೆ. ಹಾಗಾಗಿ ಅವರ ಸಂಕಷ್ಟ ಅರಿತ ಪಶ್ಚಿಮ ಬಂಗಾಳ ಸರ್ಕಾರ ನೆರವಿಗೆ ಧಾವಿಸಿದೆ.

West Bengal govt given permission for liquor
West Bengal govt given permission for liquor

By

Published : Apr 8, 2020, 7:13 PM IST

ಕೋಲ್ಕತ್ತಾ:ದೇಶಾದ್ಯಂತ ಲಾಕ್​ಡೌನ್​ ಹೇರಿರುವ ಕಾರಣ ಮದ್ಯಪ್ರಿಯರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಹಿಸುದ್ದಿ ಕೊಟ್ಟಿದ್ದಾರೆ.

ಎಣ್ಣೆ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಮಮತಾ ಸರ್ಕಾರ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಇಂದಿನಿಂದಲೇ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿಸಲಾಗಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಮಾರಾಟ, ಮಧ್ಯಾಹ್ನ 2ರಿಂದ 5ರವರೆಗೆ ಸಾರಾಯಿ ಸಾಗಾಣಿಕೆಗೆ ಅವಕಾಶವಿದೆ ಎಂದರು.

ಸಾರಾಯಿ ಅಂಗಡಿ ಹಾಗೂ ಬಾರ್​ಗಳ ಮುಂದೆ ಮೂರಕ್ಕಿಂತ ಹೆಚ್ಚು ಜನ ನಿಂತುಕೊಳ್ಳುವಂತಿಲ್ಲ. ಜತೆಗೆ ಇವರು ಪೊಲೀಸರಿಂದ ಅನುಮತಿ ಪಡೆದುಕೊಳ್ಳಬೇಕು.

ಪಶ್ಚಿಮ ಬಂಗಾಲದಲ್ಲಿಂದು ಎರಡು ಕೋವಿಡ್ ಪ್ರಕರಣ ಕಂಡು ಬಂದಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details