ಕರ್ನಾಟಕ

karnataka

ETV Bharat / bharat

ಜಾಲತಾಣದಲ್ಲಿ ನಕಲಿ ಫೋಟೋ ಶೇರ್​ ಆರೋಪ: ಬಿಜೆವೈಎಂ ಕಾರ್ಯದರ್ಶಿ 3 ದಿನ ಪೊಲೀಸ್ ಕಸ್ಟಡಿಗೆ

ಅಸನ್ಸೋಲ್ ಮುನ್ಸಿಪಲ್ ಕಾರ್ಪೊರೇಶನ್‌ನ ಸೈನ್‌ಬೋರ್ಡ್‌ನ ನಕಲಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಭಾರತೀಯ ಜನತಾ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದೆ.

West Bengal BJYM secretary sent to 3-day police custody
ಬಿಜೆವೈಎಂ ಕಾರ್ಯದರ್ಶಿ 3 ದಿನ ಪೊಲೀಸ್ ಕಸ್ಟಡಿಗೆ

By

Published : Sep 13, 2020, 9:42 AM IST

ಅಸನ್ಸೋಲ್(ಪಶ್ಚಿಮ ಬಂಗಾಳ): ಭಾರತೀಯ ಜನತಾ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಪ್ಪಾ ಚಟರ್ಜಿಯನ್ನು ಅಸನ್ಸೋಲ್‌ನ ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ಅಸನ್ಸೋಲ್ ಮುನ್ಸಿಪಲ್ ಕಾರ್ಪೊರೇಶನ್‌ನ ಸೈನ್‌ಬೋರ್ಡ್‌ನ ನಕಲಿ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಈ ಮಧ್ಯೆ ಬಿಜೆಪಿ ಸಂಸದ ಮತ್ತು ಬಿಜೆವೈಎಂ ಪಶ್ಚಿಮ ಬಂಗಾಳದ ಅಧ್ಯಕ್ಷ ಸೌಮಿತ್ರ ಖಾನ್ ಮತ್ತು ಇತರ ನಾಲ್ಕರಿಂದ-ಐದು ಜನ ಬಿಜೆಪಿ ಕಾರ್ಯಕರ್ತರನ್ನು ಅಸನ್ಸೋಲ್ ದುರ್ಗಾಪುರ ಪೊಲೀಸ್ ಆಯುಕ್ತರ ಕಚೇರಿಯ ಮುಂದೆ ಧರಣಿ ನಡೆಸುತ್ತಿದ್ದಾಗ ಬಂಧಿಸಿದ್ದಾರೆ.

ನಿನ್ನೆ ಬೆಳಗ್ಗೆಯಿಂದ ಸಂಸದ ಸೌಮಿತ್ರಾ ಖಾನ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಬಿಜೆವೈಎಂ ರಾಜ್ಯ ಕಾರ್ಯದರ್ಶಿ ಬಪ್ಪಾ ಚಟರ್ಜಿ ಬಂಧನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

ಮತ್ತೊಂದೆಡೆ ಸೌಮಿತ್ರ ಮಿತ್ರ ಖಾನ್ ಅವರನ್ನು ಅಸನ್ಸೋಲ್​ನಲ್ಲಿ ಬಂಧಿಸಿದ್ದನ್ನು ವಿರೋಧಿಸಿ ಸಿಲಿಗುರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 35 ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details