ಕರ್ನಾಟಕ

karnataka

ETV Bharat / bharat

ಮೀ-ಟು ನಂತರವೂ ಅಸಂಬದ್ಧ, ಅಹಿತಕರ ಸಂಭಾಷಣೆಗಳು ಜೀವಂತವಾಗಿವೆ...ಕೈರಾ ಅಡ್ವಾಣಿ - ನೆಟ್​​ಫ್ಲೆಕ್ಸ್

ಬಾಲಿವುಡ್​ನಲ್ಲಿ ಟ್ರೇಲರ್ ಮೂಲಕವೇ ಸದ್ದು ಮಾಡುತ್ತಿರುವ ನೆಟ್​​ಫ್ಲೆಕ್ಸ್​​​ ಮೂಲದ 'ಗಿಲ್ಟಿ' ಚಿತ್ರದಲ್ಲಿ ಕೈರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಚಿತ್ರದ ಪ್ರಮೋಷನ್ ವೇಳೆ ಕೈರಾ ಮಿ-ಟೂ ಬಗ್ಗೆ ಮಾತನಾಡಿದ್ದಾರೆ. ಜಗತ್ತಿನಲ್ಲಿ ಇಂದಿಗೂ ಅಸಂಬದ್ಧ ಮಾತುಗಳು ಹಾಗೂ ಅಹಿತಕರ ಸಂಭಾಷಣೆಗಳು ಮತ್ತು ನಿಂದನೆಗಳು ಜೀವಂತವಾಗಿಯೇ ಇದೆ ಎಂದು ನಟಿ ಕೈರಾ ಅಡ್ವಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

kiyara adwani
ಕಿಯಾರ ಅಡ್ವಾಣಿ

By

Published : Mar 9, 2020, 7:27 PM IST

ಮುಂಬೈ: ಜಗತ್ತಿನಲ್ಲಿ ಇಂದಿಗೂ ಅಸಂಬದ್ಧ ಮಾತುಗಳು ಹಾಗೂ ಅಹಿತಕರ ಸಂಭಾಷಣೆಗಳು ಮತ್ತು ನಿಂದನೆಗಳು ಜೀವಂತವಾಗಿಯೇ ಇದೆ. ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಪರಿಪಾಟ ನಡೆಯುತ್ತಲೇ ಇದೆ. ಆದರೆ ಮಿ-ಟೂ ಅಭಿಯಾನ ಪ್ರಾರಂಭವಾದಾಗಿನಿಂದ ಇಂತಹ ನಿಂದನೆಗಳು ಕೊಂಚ ಮಟ್ಟಿಗೆ ಇಳಿಕೆಯಾಗಿದೆ ಎಂದು ನಟಿ ಕೈರಾ ಅಡ್ವಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಲಿವುಡ್​​ನಲ್ಲಿ ಪ್ರಾರಂಭವಾದ ಮಿ-ಟೂ ಅಭಿಯಾನ ಭಾರತಕ್ಕೆ 2018ರಲ್ಲಿ ಕಾಲಿಟ್ಟು, ತೀವ್ರ ವೇಗವನ್ನು ಪಡೆದುಕೊಂಡಿತು. ಹಾಸ್ಯಗಾರರು, ನಟ-ನಟಿಯರು, ಸಿನಿಮಾ ತಯಾರಕರು ಸೇರಿದಂತೆ ಪತ್ರಕರ್ತರು ಸಹ ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡಿದ್ದು, ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದು ನಿಜಕ್ಕೂ ವಿಶೇಷ ಸಂಗತಿಯಾಗಿತ್ತು ಎಂದು ಕೈರಾ ಹೇಳಿದ್ದಾರೆ.

ಬಾಲಿವುಡ್​ನಲ್ಲಿ ಟ್ರೇಲರ್ ಮೂಲಕವೇ ಸದ್ದು ಮಾಡುತ್ತಿರುವ ನೆಟ್​​ಫ್ಲೆಕ್ಸ್​​​ ಮೂಲದ 'ಗಿಲ್ಟಿ' ಚಿತ್ರದಲ್ಲಿ ಕೈರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಚಿತ್ರದ ಪ್ರಮೋಷನ್ ವೇಳೆ ಕೈರಾ ಮಿ-ಟೂ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಕಾಲೇಜು ಯುವತಿ ಮೇಲೆ ನಡೆಯುವ ಅತ್ಯಾಚಾರದ ಬಗೆಗಿನ ಸತ್ಯವನ್ನು ಬಿಚ್ಚಿಡುವ ಹೃದಯವಿದ್ರಾವಕ ಕಥೆಯನ್ನು ತೋರಿಸಲಾಗಿದೆ. ಮಿ-ಟೂ ಅಭಿಯಾನದಿಂದಾಗಿ ದೇಶದಲ್ಲಿ ಹೆಣ್ಣನ್ನು ನೋಡುವ ನೋಟದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಆಗಿದೆ, ಆದರೆ ಗಮನಾರ್ಹವಾದಂತ ಯಾವುದೇ ಬದಲಾವಣೆಗಳು ಆಗಲಿಲ್ಲ. ಮಿ-ಟೂ ಅಭಿಯಾನದಿಂದ ಜಗತ್ತು ಬದಲಾಗಿದೆ ಎಂದು ಭಾವಿಸುತ್ತಿದ್ದೇವೆ, ಆದರೆ ಇಂದಿಗೂ ನಾವು ಮಿ-ಟೂ ಪ್ರಪಂಚದಲ್ಲಿಯೇ ಬದುಕುತ್ತಿದ್ದೇವೆ ಹೊರತು, ಮಿ-ಟೂ ಪ್ರಪಂಚಾದಚೆಗೆ ಬದುಕಲು ಪ್ರಯತ್ನಿಸುತ್ತಿಲ್ಲ ಎಂದು ಕೈರಾ ಹೇಳಿದ್ದಾರೆ.

ABOUT THE AUTHOR

...view details