ನವದೆಹಲಿ: ಪ್ರಧಾನಿ ಮೋದಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮೇ.3ರ ವರೆಗೆ ವಿಸ್ತರಿಸಿರುವುದನ್ನು ಕಾಂಗ್ರೆಸ್ನ ಹಿರಿಯ ಮುಖಂಡ ಮತ್ತು ಕೇಂದ್ರ ಮಾಜಿ ಸಚಿವ ಶಶಿ ತರೂರ್ ಸ್ವಾಗತಿಸಿದ್ದಾರೆ. ಹಾಗೆಯೇ ಅಗತ್ಯವಿರುವವರಿಗೆ ಪರಿಹಾರಾತ್ಮಕ ಕೆಲಸವನ್ನು ಕೂಡ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ದೇಶಾದ್ಯಂತ ಲಾಕ್‌ಡೌನ್ ವಿಸ್ತರಣೆ: ಮೋದಿ ನಿರ್ಧಾರ ಸ್ವಾಗತಿಸಿದ ಶಶಿ ತರೂರ್ - ಮೋದಿ ನಿರ್ಧಾರ ಸ್ವಾಗತಿಸಿದ ಶಶಿ ತರೂರ್
ಲಾಕ್‌ಡೌನ್ ವಿಸ್ತರಣೆಯ ಕುರಿತು ಮೋದಿಯವರ ಘೋಷಣೆಯನ್ನು ನಾನು ಬೆಂಬಲಿಸುತ್ತೇನೆ. ಇದರಿಂದ ತುಂಬಾ ಉಪಯೋಗವಾಗುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಲಾಕ್‌ಡೌನ್ ವಿಸ್ತರಣೆಯ ಕುರಿತು ಮೋದಿಯವರ ಘೋಷಣೆಯನ್ನು ನಾನು ಬೆಂಬಲಿಸುತ್ತೇನೆ. ಇದರಿಂದ ತುಂಬಾ ಉಪಯೋಗವಾಗುತ್ತಿದೆ. ಹಾಗೆಯೇ ದಿನನಿತ್ಯದ ಕೂಲಿ ಕಾರ್ಮಿಕರಿಗೆ ಪರಿಹಾರವನ್ನು ಘೋಷಿಸಬೇಕಿತ್ತು. ನರೇಗಾ ಪಾವತಿಗಳು, ಜನ್ ಧನ್ ಖಾತೆ, ರಾಜ್ಯಗಳಿಗೆ ಜಿಎಸ್‌ಟಿ ಬಾಕಿ ಇತರ ನೆರವುಗಳನ್ನು ನೀಡಬೇಕಿತ್ತು ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಸುಮಾರು 22 ನಿಮಿಷಗಳ ಭಾಷಣದಲ್ಲಿ ಮೋದಿ, ಲಾಕ್‌ಡೌನ್ ಅನುಷ್ಠಾನವನ್ನು ಎರಡನೇ ಹಂತದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಏಕಾಏಕಿ ಹೊಸ ಪ್ರದೇಶಗಳಿಗೆ ಹರಡದಂತೆ ಮಾರ್ಗಸೂಚಿಗಳನ್ನು ಬುಧವಾರ ತರಲಾಗುವುದು. ಕೊರೊನಾ ವೈರಸ್ ಪರೀಕ್ಷೆಯ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.