ಕರ್ನಾಟಕ

karnataka

ETV Bharat / bharat

'ವೆಲ್​​​​​ಕಮ್​​​​ ಬ್ಯಾಕ್': ಸಚಿನ್ ಪೈಲಟ್ ಸ್ವಾಗತಿಸಿದ ಕಾಂಗ್ರೆಸ್ ನಾಯಕರು - ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಶಮನ

ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಶಮನವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಚಿನ್ ಪೈಲಟ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.

rajasthan
rajasthan

By

Published : Aug 11, 2020, 10:43 AM IST

ನವದೆಹಲಿ: ರಾಹುಲ್ ಗಾಂಧಿ ಭೇಟಿ ಬಳಿಕ ಸಚಿನ್ ಪೈಲಟ್ ಬಿಕ್ಕಟ್ಟು ಶಮನವಾಗಿದೆ. ಈ ಹಿನ್ನೆಲೆ ಅವರನ್ನು ಹಲವಾರು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಮರಳಿ ಸ್ವಾಗತಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ನಿನ್ನೆ ರಾತ್ರಿ ಸಚಿನ್ ಪೈಲಟ್, ನಾನು ಯಾವತ್ತೂ ಹುದ್ದೆಗಳಿಗಾಗಿ ತಲೆಕೆಡಿಸಿಕೊಂಡಿಲ್ಲ, ಬದಲಿಗೆ ತತ್ವಗಳಿಗಾಗಿ ಹೋರಾಡಿದ್ದೇನೆ ಎಂದು ಹೇಳಿದರು.

"ಸ್ವಾಗತ ಸಚಿನ್, ರಾಜಸ್ಥಾನವನ್ನು ರಚನಾತ್ಮಕವಾಗಿ ಕಟ್ಟಿ ಬೆಳೆಸಲು ಪಕ್ಷ ನಿಮ್ಮನ್ನು ಕಾಯುತ್ತಿದೆ" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಸಿಂಗ್ವಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, "ರಾಜಸ್ಥಾನ ಕಾಂಗ್ರೆಸ್​ ಸರ್ಕಾರದ ರಾಜಕೀಯ ಬಿಕ್ಕಟ್ಟು ರಾಹುಲ್ ಗಾಂಧಿ ಅವರಿಂದ ಸೌಹಾರ್ದಯುತವಾಗಿ ಪರಿಹರಿಸಲ್ಪಟ್ಟಿದೆ" ಎಂದು ಹೇಳಿದರು.

ಅಂತಿಮವಾಗಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಪ್ರಯತ್ನಗಳು ರಾಜಸ್ಥಾನ ಕಾಂಗ್ರೆಸ್ ವಿವಾದವನ್ನು ಬಗೆಹರಿಸಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ರಾಜಿ ಸಂಧಾನದ ಮಾರ್ಗವು ಸಚಿನ್ ಪೈಲಟ್‌ ಹಾಗೂ ನಮ್ಮೆಲ್ಲರಿಗೂ ಉತ್ತಮವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details