ಮಧುರೈ(ತಮಿಳುನಾಡು): ಮಹಾಮಾರಿ ಕೊರೊನಾ ವೈರಸ್ನಿಂದಾಗಿ ದೇಶ ಲಾಕ್ಡೌನ್ ಆಗಿದ್ದು, ಇದರಿಂದ ಪ್ರತಿಯೊಬ್ಬರೂ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಲಾಕ್ಡೌನ್ ಘೋಷಣೆ ಮಾಡಿದಾಗಿನಿಂದಲೂ ಅನೇಕ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ. ದೇಶದಲ್ಲಿನ ಎಲ್ಲಾ ದೇವಾಲಯಗಳೂ ಬಂದ್ ಆಗಿವೆ.
ಲಾಕ್ಡೌನ್ನಿಂದಾಗಿ ದೇವಸ್ಥಾನ ಬಂದ್: ಬಾಗಿಲಲ್ಲೇ ನಿಂತು ಹೊಸ ಬಾಳಿಗೆ ಕಾಲಿಟ್ಟ ನವಜೋಡಿ!
ಕಿಲ್ಲರ್ ಕೊರೊನಾ ಸೃಷ್ಟಿ ಮಾಡಿರುವ ಅವಾಂತರ ಒಂದೆರಡಲ್ಲ. ಇದರ ವಿರುದ್ಧ ಹೋರಾಟ ನಡೆಸಲು ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದು, ಪರಿಣಾಮ ಹಲವು ತೊಂದರೆ ಉದ್ಭವವಾಗುತ್ತಿದೆ.
Wedding rituals performed at temple's doorstep in Madurai
ಕೊರೊನಾ ಭೀತಿ ನಡುವೆ ತಮಿಳುನಾಡಿನ ಮಧುರೈನ ತಿರುಪ್ಪರಂಕುನ್ರಾಮ್ ಮುರುಗನ್ ದೇವಸ್ಥಾನ ಕೂಡ ಬಂದ್ ಆಗಿದೆ. ಆದರೆ ದೇವಸ್ಥಾನದ ಬಾಗಿಲಲ್ಲೇ ನಿಂತುಕೊಂಡು ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ತಮಿಳುನಾಡಿನಲ್ಲಿ ಇಂದು ಒಂದೇ ದಿನ 17 ಕೋವಿಡ್-19 ಕೇಸ್ ಕಂಡು ಬಂದಿದ್ದು, ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಬಂದ್ ಆಗಿರುವ ದೇವಸ್ಥಾನದ ಎದುರುಗಡೆ ನಿಂತು ಹಾರ ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ಎರಡು ಕುಟುಂಬದ ಸದಸ್ಯರು ಮಾತ್ರ ಉಪಸ್ಥಿತರಿದ್ದರು.