ನವದೆಹಲಿ: ಬಿಸಿಲಿನಿಂದ ಕಂಗೆಟ್ಟಿದ್ದ ದೆಹಲಿಯಲ್ಲಿ ವರುಣನ ಆಗಮನವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ವರುಣನ ಅಬ್ಬರ: ಮಳೆ ನೀರಿನಿಂದ ಆವೃತವಾದ ರಾಜಪಥ - rain in delhi
ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ವರುಣನ ಸಿಂಚನವಾಗಿದೆ. ಬೆಳ್ಳಂಬೆಳಗ್ಗೆ ದೆಹಲಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.
ರಾಜಧಾನಿಯಲ್ಲಿ ವರುಣನಬ್ಬರ
ದೆಹಲಿಯಾದ್ಯಂತ ಭಾರಿ ಮಳೆ ಆಗುತ್ತಿದ್ದು, ದೇಶದ ಪ್ರತಿಷ್ಠಿತ ರಾಜಪಥ ಮಳೆ ನೀರಿನಿಂದ ಆವೃತವಾಗಿದೆ. ಅದರ ದೃಶ್ಯಗಳು ಈಗ ವೈರಲ್ ಕೂಡಾ ಆಗಿದೆ.
ಇನ್ನು ರಾಜಧಾನಿಯ ಮಂಡಿ ಹೌಸ್ ಪ್ರದೇಶ ಕೂಡ ಮಳೆ ನೀರಿನಿಂದ ಆವೃತವಾಗಿದೆ. ಮಳೆ ನೀರಿನಲ್ಲೇ ವಾಹನಗಳು ಸಂಚರಿಸುವ ದೃಶ್ಯಗಳು ಕಂಡು ಬಂದವು.