ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈ ಜೋಡಿಸುವುದಾಗಿ ಅಮೆರಿಕ ಸಂಸದ ಫ್ರಾನ್ಸಿಸ್ ರೂನಿ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲ ಇರಲಿದೆ: ಅಮೆರಿಕ ಸಂಸದ - ಭಯೋತ್ಪಾದನೆ ವಿರುದ್ಧ ನಿರಂತರ ಹೋರಾಟ
ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲ ಇರಲಿದೆ ಎಂದು ಅಮೆರಿಕ ಸಂಸದ ಫ್ರಾನ್ಸಿಸ್ ರೂನಿ ಹೇಳಿದ್ದಾರೆ.
![ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲ ಇರಲಿದೆ: ಅಮೆರಿಕ ಸಂಸದ](https://etvbharatimages.akamaized.net/etvbharat/prod-images/768-512-5140478-thumbnail-3x2-terror.jpg)
ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಭೇಟಿಯ ನಂತರ ಮಾತನಾಡಿದ ಅವರು, ಭಯೋತ್ಪಾದನೆ ಗೆಸಂಬಂಧಪಟ್ಟಂತೆ ಭಾರತ ಪ್ರಾದೇಶಿಕ ಮತ್ತು ಭೌಗೋಳಿಕವಾಗಿ ಸಾಕಷ್ಟು ಅಪಾಯಗಳನ್ನು ಎದುರಿಸುತ್ತಿದೆ. ಇಸ್ಲಾಮಿಕ್ ತೀವ್ರವಾದಿಗಳು ಜಮ್ಮುಕಾಶ್ಮೀರ ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹರಡುತ್ತಿದ್ದಾರೆ. ಹಾಗಾಗಿ ಉಗ್ರ ನಿಗ್ರಹದ ವಿಚಾರವಾಗಿ ನಾವು ಭಾರತಕ್ಕೆ ಸಹಕಾರ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೊಂದೆಡೆ ಚೀನಾ ದೇಶದ ಆಕ್ರಮಣಕಾರಿ ನೀತಿ ಹಾಗು ಅದು ತನ್ನ ಕಬಂಧಬಾಹುಗಳನ್ನು ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಹರಡುತ್ತಿರುವುದು ಕೂಡಾ ಭಾರತಕ್ಕೆ ಅಪಾಯ ತಂದಿರಿಸಿದೆ. ಗಡಿಯಾಚೆಗಿನ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ಭಾರತ ಮತ್ತು ಅಮೆರಿಕ ಆರ್ಥಿಕ ಸಹಭಾಗಿತ್ವವನ್ನು ಗಟ್ಟಿಗೊಳಿಸಬೇಕು. ಅದೇ ರೀತಿ ಸ್ವಾತಂತ್ರ್ಯ ಹಾಗು ಪ್ರಜಾಪ್ರಭುತ್ವದ ಧ್ಯೇಯೋದ್ದೇಶಗಳನ್ನು ಜಗತ್ತಿನೆಲ್ಲೆಡೆ ಬಲಗೊಳಿಸಬೇಕು ಎಂದು ಅವರು ಹೇಳಿದ್ರು.