ನವದೆಹಲಿ :ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ದೇಶದ ಪ್ರತಿ ನಾಗರಿಕ ಕೂಡ "ಸ್ಥಳೀಯ ಭಾರತ"ವನ್ನು "ಗ್ಲೋಕಲ್ ಇಂಡಿಯಾ" (ಗ್ಲೋಬಲ್ ಮತ್ತು ಲೋಕಲ್) ಆಗಿ ಪರಿವರ್ತಿಸುವ 'ಸ್ವಾವಲಂಬಿ ಭಾರತ' ಅಭಿಯಾನ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಉಪರಾಷ್ಟ್ರಪತಿ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲಿಮೆಂಟ್ ಮೊಬೈಲ್ ಅಪ್ಲಿಕೇಶನ್‌ನ ವರ್ಚುವಲ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ ವೃದ್ಧಿಗೆ ಸೂಕ್ತ ಪರಿಸರ ವ್ಯವಸ್ಥೆ ರಚಿಸಬೇಕೆಂದು ಕರೆ ನೀಡಿದರು.