ಕರ್ನಾಟಕ

karnataka

ETV Bharat / bharat

ದಾಳಿಗೂ ಮುನ್ನ ನಾವು ಸಾಕಷ್ಟು ಸಿಗರೇಟ್ ಸೇದಿದ್ದೆವು! ಬಾಲಾಕೋಟ್‌ ದಾಳಿಯ ರೋಚಕ ಕ್ಷಣಗಳು

ಪಾಕಿಸ್ತಾನದ ಕುಮ್ಮಕ್ಕಿನಿಂದ ಬಾಲಾಕೋಟ್‌ನಲ್ಲಿ ನಡೆಯುತ್ತಿದ್ದ ಉಗ್ರ ತರಬೇತಿ ಶಿಬಿರಗಳ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ 'ಆಪರೇಷನ್ ಬಂದರ್' ಎನ್ನುವ ಕೋಡ್​ವರ್ಡ್​ ನೀಡಲಾಗಿತ್ತು. 1971 ರ ಬಳಿಕ ಭಾರತದ ಏರ್‌ಫೋರ್ಸ್ ನಡೆಸಿದ ಮೊದಲ ದಾಳಿ ಇದಾಗಿತ್ತು.

ಆಪರೇಷನ್ ಬಂದರ್

By

Published : Jun 25, 2019, 8:34 AM IST

Updated : Jun 25, 2019, 10:11 AM IST

ಗ್ವಾಲಿಯರ್: ಪುಲ್ವಾಮಾ ಉಗ್ರದಾಳಿಯ ಬಳಿಕ ಪ್ರತಿಯೊಬ್ಬ ಭಾರತೀಯನ ಮನಸ್ಸು ಪ್ರತೀಕಾರಕ್ಕಾಗಿ ಹಾತೊರೆಯುತ್ತಿತ್ತು. ಫೆಬ್ರವರಿ 26ರಂದು ವಾಯುಸೇನೆ ತಕ್ಕ ಉತ್ತರ ಕೊಟ್ಟಿತ್ತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಫೈಟರ್‌ಜೆಟ್‌ನ ಇಬ್ಬರು ಸ್ಕ್ವಾಡ್ರನ್​ ಲೀಡರ್​ಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

1971ರ ಬಳಿಕ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ದಾಳಿಗೆ 'ಆಪರೇಷನ್ ಬಂದರ್' ಎನ್ನುವ ಕೋಡ್​ವರ್ಡ್​ ನೀಡಲಾಗಿತ್ತು. ಆ ಮಹತ್ವದ ವಾಯುದಾಳಿಗೂ ಮುನ್ನ ನಾವು ಸಾಕಷ್ಟು ಸಿಗರೇಟ್ ಸೇದಿದ್ದೆವು ಎನ್ನುತ್ತಾ ಸ್ಕ್ವಾಡ್ರನ್​ ಲೀಡರ್‌ಗಳು ಮಾತು ಶುರು ಮಾಡಿದ್ದಾರೆ.

ಬಾಲಕೋಟ್​ ವಾಯುದಾಳಿ ಕೋಡ್​ವರ್ಡ್​ ಬಹಿರಂಗ..!

'ಸ್ಪೈಸ್ 2000' ಎನ್ನುವ ಸ್ಯಾಟಲೈಟ್​ ನಿರ್ದೇಶಿತ ಬಾಂಬ್​​ಗಳನ್ನು ಎರಡೂ ಪೈಲಟ್​​ಗಳು ಗುರುತುಪಡಿಸಲಾಗಿದ್ದ ಉಗ್ರನೆಲೆಗಳ ಜಾಗಕ್ಕೆ ಹಾಕಿದ್ದು, ಎರಡೂವರೆ ಗಂಟೆಯಲ್ಲಿ ಏರ್​ಸ್ಟ್ರೈಕ್​ ಸಂಪೂರ್ಣವಾಗಿ ಕೊನೆಯಾಗಿತ್ತು ಎಂದು ಸ್ಕ್ವಾಡ್ರನ್​ ಲೀಡರ್ ಹೇಳಿದ್ದಾರೆ.

ವಾಯುಸೇನೆಯ ಕಾರ್ಯಾಚರಣೆಗಳ ಬಗ್ಗೆ ಅನುಮಾನ ಹೊಂದಿದ್ದ ಹಲವರಿಗೆ ನಮ್ಮ ದಾಳಿ ಉತ್ತರವಾಗಿತ್ತು. ವೈರಿಗಳ ವಿರುದ್ಧ ಯಶಸ್ವಿಯಾಗಿ ಗುರಿಯಿಟ್ಟು ಹೊಡೆಯೋದ್ರಲ್ಲಿ ನಮಗೆ ಯಾವುದೇ ಸಂಶಯವಿರಲಿಲ್ಲ. 'ಸ್ಪೈಸ್​​ 2000' ಯಾವುದೇ ಕಾರಣಕ್ಕೂ ಗುರಿ ತಪ್ಪುವ ಸಾಧ್ಯತೆಯೇ ಇಲ್ಲ ಎನ್ನುತ್ತಾರೆ ಯುದ್ಧ ವಿಮಾನದ ಪೈಲಟ್​​.

ಮಿರಾಜ್ 2000 ಯುದ್ಧ ವಿಮಾನ

ಎರಡೂವರೆ ಗಂಟೆಯ ದಾಳಿ ಕೆಲ ನಿಮಿಷಗಳಲ್ಲೇ ಮುಗಿದಂತೆ ಭಾಸವಾಯಿತು. ಮಾಡಬೇಕಿದ್ದ ಕೆಲಸ ಸಾಕಷ್ಟಿದ್ದ ಕಾರಣ ಸಮಯ ಸರಿದಿದ್ದೇ ಗೊತ್ತಾಗಿಲ್ಲ ಎಂದು ಸ್ಕ್ವಾಡ್ರನ್ ಲೀಡರ್ ಹೇಳಿದ್ದಾರೆ.

ವಾಯುದಾಳಿಯ ವೇಳೆ ಪಾಕಿಸ್ತಾನ ಸಹ ಮರುದಾಳಿ ಮಾಡಬಹುದಾದ ಸಾಧ್ಯತೆಯೂ ಇತ್ತು. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ದಾಳಿಯನ್ನು ಯೋಜಿತ ರೀತಿಯಲ್ಲೇ ಕಾರ್ಯಗತಗೊಳಿಸಲಾಗಿತ್ತು. ಇಬ್ಬರು ಪೈಲಟ್​ಗಳ ಪ್ರಕಾರ, ದಾಳಿಯ ವೇಳೆ ಅವರಿಬ್ಬರಿಗೂ ಪಾಕ್​​ನಿಂದ ಯಾವುದೇ ಪೈಪೋಟಿ ಎದುರಾಗಿಲ್ಲ.

ದಾಳಿಯ ಬಗ್ಗೆ ಎಲ್ಲೂ ಮಾಹಿತಿ ಸೋರಿಕೆಯಾಗದಂತೆ ಸಾಕಷ್ಟು ಎಚ್ಚರ ವಹಿಸಿದ್ದೆವು. ನಮ್ಮ ಕುಟುಂಬದವರಿಗೂ ದಾಳಿಯಲ್ಲಿ ನಾನು ಭಾಗಿಯಾಗಿರುವ ಬಗ್ಗೆ ಒಂದಿಂಚೂ ಮಾಹಿತಿ ಇರಲಿಲ್ಲ. ದಾಳಿಯ ವಿಚಾರ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಂತೆ ನನ್ನ ಪತ್ನಿ ನೀವೂ ಇದರಲ್ಲಿ ಭಾಗಿಯಾಗಿದ್ರಾ? ಎಂದು ಪ್ರಶ್ನಿಸಿದ್ದಳು. ಆದರೆ ನಾನು ಏನೂ ಮಾತನಾಡದೆ ಸುಮ್ಮನೆ ಮಲಗಿದೆ ಎಂದು ಪೈಲಟ್ ವಿಷಯ ಹೊರಹಾಕಿದ್ದಾರೆ.

ಪೈಲಟ್​ಗಳು ದಾಳಿಯ ಮುನ್ನಾದಿನದವರೆಗೂ ತಮ್ಮ ದೈನಂದಿನ ಚಟುವಟಿಕೆ ಹಾಗೂ ಕೆಲಸದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಬದಲಾವಣೆ ಮಾಡಿದರೆ ಉದ್ಭವಿಸಬಹುದಾದ ಅನುಮಾನದಿಂದ ಎಲ್ಲರೂ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದ್ದರು.

ವಿಮಾನವನ್ನು ಒಡಿಶಾದ ಬಾಲಾಸೋರ್​ನಿಂದ ಉದ್ದೇಶಪೂರ್ವಕವಾಗಿ ಅತ್ಯಂತ ದೀರ್ಘ ಮಾರ್ಗದ ಮೂಲಕ ಕಾಶ್ಮೀರವನ್ನು ತಲುಪಲಾಯಿತು ಎಂದು ದಾಳಿಯ ಹಿಂದಿನ ಒಂದಷ್ಟು ಮಾಹಿತಿಯನ್ನು ದಾಳಿಯಲ್ಲಿ ಭಾಗಿಯಾದ ಪೈಲಟ್ ವಿವರಿಸಿದ್ದಾರೆ.

ಕಾರ್ಯಾಚರಣೆಯ ಕೊನೆಯಲ್ಲಿ ಪಾಕಿಸ್ತಾನದ ಜೆಟ್‌ವೊಂದು ದಾಳಿಗೆ ಮುಂದಾಗಿತ್ತಾದರೂ ಆ ವೇಳೆಗಾಗಲೇ ಭಾರತದ ಮಿರಾಜ್​​ ಯುದ್ಧ ವಿಮಾನ ಸುರಕ್ಷಿತ ಸ್ಥಳವನ್ನು ಪ್ರವೇಶಿಸಿತ್ತು ಎಂದು ಪೈಲಟ್ ವಿವರಣೆ ನೀಡಿದ್ರು.

ಇಬ್ಬರು ಪೈಲಟ್​ಗಳ ಪೈಕಿ ಓರ್ವ ಗಡಿ ನಿಯಂತ್ರಣ ರೇಖೆಯಿಂದ 8 ಕಿಲೋಮೀಟರ್ ದೂರ ಒಳನುಗ್ಗಿ ಉಗ್ರನೆಲೆಗಳ ಮೇಲೆ ಸ್ಪೈಸ್ ಬಾಂಬ್ ಹಾಕಿದ್ದರು.

Last Updated : Jun 25, 2019, 10:11 AM IST

ABOUT THE AUTHOR

...view details