ಕರ್ನಾಟಕ

karnataka

ETV Bharat / bharat

ಅರ್ನಾಬ್ ವಶಕ್ಕೆ ಪಡೆದ ಸಿಐಡಿ: ತುರ್ತು ಪರಿಸ್ಥಿತಿ ನೆನಪಾಗುತ್ತಿದೆ ಎಂದ ಜಾವಡೇಕರ್ - ಅರ್ನಾಬ್ ಗೋಸ್ವಾಮಿ ಪೊಲೀಸ್ ವಶಕ್ಕೆ

ಮಹಾರಾಷ್ಟ್ರ ಸಿಐಡಿ ಅಧಿಕಾರಿಗಳು ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇದು ಪತ್ರಿಕೋದ್ಯಮವನ್ನು ನಡೆಸಿಕೊಳ್ಳುವ ರೀತಿ ಅಲ್ಲ ಎಂದಿದ್ದಾರೆ. ಅಲ್ಲದೆ, ಈ ಪ್ರಕರಣ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ ಎಂದು ಹೇಳಿದ್ದಾರೆ.

Prakash Javadekar
ಪ್ರಕಾಶ್ ಜಾವಡೇಕರ್

By

Published : Nov 4, 2020, 10:32 AM IST

ನವದೆಹಲಿ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ವಶಕ್ಕೆ ಪಡೆದಿರುವುದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು "ಮಹಾರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಇದು ಪತ್ರಿಕೋದ್ಯಮವನ್ನು ನಡೆಸಿಕೊಳ್ಳುವ ರೀತಿ ಅಲ್ಲ. ಪತ್ರಿಕೋದ್ಯಮವನ್ನು ಈ ರೀತಿ ಪರಿಗಣಿಸಿದ ತುರ್ತು ದಿನಗಳನ್ನು ಇದು ನೆನಪಿಸುತ್ತದೆ" ಎಂದಿದ್ದಾರೆ.

ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮುಂಬೈ ಪೊಲೀಸ್​​ ವಶಕ್ಕೆ

ಅಲ್ಲದೆ "ಮಹಾರಾಷ್ಟ್ರದಲ್ಲಿ ಫ್ಯಾಸಿಸ್ಟ್ ಮತ್ತು ತುರ್ತು ಪರಿಸ್ಥಿತಿಯಂತ ಮನಸ್ಥಿತಿ ಎದ್ದು ಕಾಣುತ್ತಿದ್ದು, ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಅನ್ನು ನಾವು ಖಂಡಿಸುತ್ತೇವೆ" ಎಂದು ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

2018 ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿ, ಅರ್ನಾಬ್ ಗೋಸ್ವಾಮಿ ಅವರನ್ನು ವಶಕ್ಕೆ ತೆಗೆದುಕೊಂಡಿದೆ.

ABOUT THE AUTHOR

...view details