ಕೋಲ್ಕತಾ :ನಮ್ಮ ದೇಶದ ಬಗ್ಗೆ ನಮಗೆ ಹೆಮ್ಮೆ ಇದೆ. ಚೀನಾ ವಿರುದ್ಧದ ಸಂಘರ್ಷದಲ್ಲಿ ಎಲ್ಲರಿಗೂ ಒಟ್ಟಾಗಿ ಹೋರಾಡೋಣ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚೀನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡೋಣ.. ಬಂಗಾಳ ಸಿಎಂ ದೀದಿ - ಮಮತಾ ಬ್ಯಾನರ್ಜಿ
ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಸಂಬಂಧ ಇಡೀ ದೇಶ ಚೀನಾ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
![ಚೀನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡೋಣ.. ಬಂಗಾಳ ಸಿಎಂ ದೀದಿ We are proud of our nation, we will fight this together-West Bengal CM Mamata Banerjee](https://etvbharatimages.akamaized.net/etvbharat/prod-images/768-512-7658631-thumbnail-3x2-mamatha.jpg)
ಚೀನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡೋಣ; ಬಂಗಾಳ ಸಿಎಂ ದೀದಿ
ಜೂನ್ 19ಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಸರ್ವಪಕ್ಷದ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಪರ ಎಲ್ಲರೂ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಗಾಲ್ವನ್‌ನಲ್ಲಿ ನಡೆದಿದ್ದ ಭಾರತ-ಚೀನಾ ಸೈನಿಕರ ಘರ್ಷಣೆಯಲ್ಲ 20 ಯೋಧರು ಹುತಾತ್ಮರಾಗಿದ್ದಾರೆ. ಈ ಸಂಬಂಧ ಭಾರತ ಕೈಗೊಳ್ಳಬೇಕಿರುವ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇದೇ 19ಕ್ಕೆ ಸರ್ವಪಕ್ಷ ಸಭೆ ಕರೆದಿದ್ದಾರೆ.