ಕೋಲ್ಕತ್ತಾ(ಪಶ್ಚಿಮ ಬಂಗಾಳ): ನವರಾತ್ರಿ ಸಂದರ್ಭದಲ್ಲಿ ಎಲ್ಲೆಡೆ ಅದ್ಧೂರಿಯಾಗಿ ದುರ್ಗಾ ಪೂಜೆ ಜರುಗುತ್ತದೆ. ಅದರಲ್ಲಿಯೂ ಪಶ್ಚಿಮ ಬಂಗಾಳದ ಪ್ರಮುಖ ಹಬ್ಬಗಳಲ್ಲಿ ದುರ್ಗಾ ಪೂಜೆ ಪ್ರಮುಖವಾದದ್ದು.
ಕೋಲ್ಕತ್ತಾದಲ್ಲಿ ದುರ್ಗಾ ವಿಗ್ರಹ ನಿಮಜ್ಜನ ಮೆರವಣಿಗೆ: ಪೊಲೀಸರಿಂದ ಲಘು ಲಾಠಿ ಚಾರ್ಜ್ - ಕೋಲ್ಕತಾದಲ್ಲಿ ದುರ್ಗಾ ವಿಗ್ರಹ ಮಜ್ಜನ ಮೆರವಣಿಗೆ
ಪಶ್ಚಿಮ ಬಂಗಾಳದ ಪ್ರಮುಖ ಹಬ್ಬಗಳಲ್ಲಿ ಒಂದಾದ ದುರ್ಗಾ ಪೂಜೆ ಹಬ್ಬದ ಪ್ರಮುಖ ಆಕರ್ಷಣೆ. ಆದ್ರೆ ಈ ಬಾರಿ ಇದು ತಲೆನೋವಾಗಿ ಪರಿಣಮಿಸಿದೆ. ಸಾಮಾಜಿಕ ಅಂತರ ಪಾಲನೆಯಾಗದೇ ಹಬ್ಬ ಆಚರಣೆ ನಡೆಸಲಾಗುತ್ತಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸುತ್ತಿದ್ದಾರೆ.
ಪೊಲೀಸರಿಂದ ಲಘು ಲಾಠಿ ಚಾರ್ಜ್
ನವರಾತ್ರಿ ಹಿನ್ನೆಲೆ ಕೋಲ್ಕತ್ತಾದಲ್ಲಿ ನಡೆದ ದುರ್ಗಾದೇವಿಯ ವಿಗ್ರಹದ ನಿಮಜ್ಜನ ಮೆರವಣಿಗೆಯಲ್ಲಿ, ಪೊಲೀಸ್ ಲಾಠಿ ಪ್ರಹಾರ ನಡೆಸಿದ್ದಾರೆ. ದುರ್ಗಾ ಪೂಜಾ ಸಮಿತಿಯ ಸದಸ್ಯರು ನಿನ್ನೆ ದುರ್ಗಾ ವಿಗ್ರಹವನ್ನು ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಹೆಚ್ಚಿನ ಸದಸ್ಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರಿಂದ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಈ ಹಿನ್ನೆಲೆ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದಾರೆ.