ಕೋಲ್ಕತ್ತಾ: ಜೊರಾಬಗನ್ನಲ್ಲಿ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ವಾಚ್ಮ್ಯಾನ್ ಒಬ್ಬನನ್ನು ಕೋಲ್ಕತ್ತಾ ನರಹತ್ಯಾ ತನಿಖಾ ದಳ ಬಂಧಿಸಿದೆ.
ಜೊರಾಬಗನ್ ಅಪ್ರಾಪ್ತೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ: ವಾಚ್ಮ್ಯಾನ್ ಬಂಧನ - kolkatta news
ಕೋಲ್ಕತಾದ ಜೊರಾಬಗನ್ನಲ್ಲಿ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ನರಹತ್ಯಾ ತನಿಖಾ ದಳ ಮನೆಯೊಂದರ ಕಾವಲುಗಾರನನ್ನು ಬಂಧಿಸಿದೆ.
![ಜೊರಾಬಗನ್ ಅಪ್ರಾಪ್ತೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ: ವಾಚ್ಮ್ಯಾನ್ ಬಂಧನ Jorabagan minor rape](https://etvbharatimages.akamaized.net/etvbharat/prod-images/768-512-10509583-thumbnail-3x2-mng.jpg)
ಜಾರ್ಖಂಡ್ ಮೂಲದ ರಾಮ್‌ಕುಮಾರ್ ಅಲಿಯಾಸ್ ಲಂಬು ಬಂಧಿತ ಆರೋಪಿ. ಇನ್ನು ಪೊಲೀಸರು ವಿಚಾರಣೆ ನಡೆಸಿ ಅನೇಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಜೀವನೋಪಾಯಕ್ಕಾಗಿ ಕೆಲವು ವರ್ಷಗಳ ಹಿಂದೆ ಕೋಲ್ಕತ್ತಾಗೆ ಬಂದ ಲಂಬು ಮನೆಯೊಂದರಲ್ಲಿ ವಾಚ್ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಇನ್ನು ಈ ಘಟನೆ ನಡೆದ ದಿನ ಲಂಬು ಕಂಠಪೂರ್ತಿ ಕುಡಿದಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, 'ಲಂಬು 8 ವರ್ಷದ ಬಾಲಕಿಯನ್ನು ಮೊದಲು ಬಿರಿಯಾನಿ ಆಮಿಷವೊಡ್ಡಿ ಮನೆಗೆ ಕರೆಸಿಕೊಂಡಿದ್ದಾನೆ. ಬಳಿಕ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನು ಕುಡಿದ ಮತ್ತಿನಲ್ಲಿದ್ದ ಆತ ಪ್ರಜ್ಞಾಹೀನನಾಗಿದ್ದಾನೆ. ಕೆಲ ಸಮಯದ ಬಳಿಕ ಎಚ್ಚರಗೊಂಡ ಲಂಬು, ಘಟನೆ ಬಗ್ಗೆ ಇತರರಿಗೆ ಬಾಲಕಿ ಮಾಹಿತಿ ಬಹಿರಂಗಪಡಿಸುತ್ತಾಳೆ ಎಂಬ ಭಯದಿಂದ ಆಕೆಯನ್ನು ಕತ್ತುಹಿಸುಕಿ ಸಾಯಿಸಿದ್ದಾನೆ. ಬಳಿಕ ಸಾವನ್ನಪ್ಪಿದ್ದಾಳೆಯೇ ಎಂಬುದನ್ನು ದೃಢಪಡಿಸಲು ಆತ ಚಾಕುವಿನಿಂದ ಇರಿದಿದ್ದಾನೆ' ಎಂದು ತಿಳಿದುಬಂದಿದೆ.