ಝಾನ್ಸಿ (ಉತ್ತರ ಪ್ರದೇಶ): ವಿಶೇಷ ಶ್ರಮಿಕ್ ರೈಲು ಹತ್ತಲು ಕಾಯುತ್ತಿದ್ದ ವಲಸೆ ಕಾರ್ಮಿಕರು ಹಸಿವಿನಿಂದಾಗಿ ಆಹಾರದ ಪ್ಯಾಕೆಟ್‌ಗಳನ್ನು ಕಿತ್ತುಕೊಂಡು ತಿಂದಿರುವ ಹೃದಯವಿದ್ರಾವಕ ಘಟನೆ ಝಾನ್ಸಿಯಲ್ಲಿ ನಡೆದಿದೆ.
ಹಸಿವು ತಾಳಲಾಗದೇ ಆಹಾರದ ಪ್ಯಾಕೆಟ್ಗಳನ್ನೇ ಕಿತ್ಕೊಂಡ್ ತಿಂದ ವಲಸೆ ಕಾರ್ಮಿಕರು: ಪೊಲೀಸರಿಂದ ಲಾಠಿ ಚಾರ್ಜ್ - ವಲಸೆ ಕಾರ್ಮಿಕರ ಮೇಲೆ ಲಾಠಿ ಚಾರ್ಜ್
ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಮನಕಲಕುವ ದೃಶ್ಯವೊಂದು ಕಂಡುಬಂದಿದೆ. ವಲಸೆ ಕಾರ್ಮಿಕರು ಆಹಾರದ ಪ್ಯಾಕೆಟ್‌ಗಳನ್ನು ಕಿತ್ತುಕೊಂಡು ತಿಂದಿದ್ದಾರೆ. ಈ ವೇಳೆ ರೈಲ್ವೆ ಪೊಲೀಸರು ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
ಪ್ರಯಾಣಕ್ಕಾಗಿ ನೋಂದಾಯಿಸಿದ್ದ ವಲಸೆ ಕಾರ್ಮಿಕರಿಗೆ ಆಹಾರ ಪ್ಯಾಕೆಟ್‌ಗಳನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ತೀವ್ರ ಹಸಿವಿನಿಂದ ಬಳಲುತ್ತಿದ್ದ ಬಡಪಾಯಿಗಳು ಆಹಾರ ಪ್ಯಾಕೆಟ್‌ಗಳನ್ನು ಕಸಿದುಕೊಂಡು ರೈಲು ಹತ್ತುತ್ತಿರುವುದು ವಿಡಿಯೋದಲ್ಲಿದೆ. ಕಾರ್ಮಿಕರು ಆಹಾರ ಪೊಟ್ಟಣಗಳನ್ನು ಕಿತ್ತುಕೊಂಡು ತಿನ್ನುವುದನ್ನು ನೋಡಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಆರ್‌ಪಿಎಫ್ ಸಿಬ್ಬಂದಿ ಅವರ ಮೇಲೆ ಲಾಠಿ ಬೀಸಿದ್ದಾರೆ.
'ವಲಸೆ ಕಾರ್ಮಿಕರಿಗಾಗಿ ಆಹಾರ ಪ್ಯಾಕೆಟ್‌ಗಳನ್ನು ಮೊದಲೇ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರು ಕಸಿದುಕೊಳ್ಳಲು ಪ್ರಾರಂಭಿಸಿದರು. ನಾವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಕಾರ್ಮಿಕರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದೇವೆ' ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.