ಸಂಬಲ್‌ಪುರ್(ಒಡಿಶಾ): ಅಕ್ಟೋಬರ್ 2ರಿಂದ ದೇಶಾದ್ಯಂತ ಏಕ ಬಳಕೆ (ಸಿಂಗಲ್ ಯೂಸ್) ಪ್ಲಾಸ್ಟಿಕ್ ಬಳಕೆ ರದ್ದಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು ನಡೆಯುತ್ತಿವೆ. ಒಡಿಶಾದ ಸಂಬಲ್ಪುರ್ದಲ್ಲಿ ಮಹಿಳಾ ಸ್ವಸಹಾಯ ಗುಂಪು ಪ್ಲಾಸ್ಟಿಕ್ ವಸ್ತು ಬಳಸಿ ತಯಾರು ಮಾಡುತ್ತಿದ್ದ ಪ್ಲೇಟ್ಗಳನ್ನು ಇದೀಗ ಎಲೆಗಳ ಮೂಲಕ ತಯಾರಿಸುತ್ತಿದೆ. ಇಕೋ ಫ್ರೆಂಡ್ಲಿ ಉತ್ಪನ್ನ ತಯಾರಿಸುತ್ತಾ ಪರಿಸರ ಸಂರಕ್ಷಣೆ ಕೈಂಕರ್ಯ ಮಾಡಿ ಜನಮನ ಸೆಳೆಯುತ್ತಿದೆ.
ಪ್ಲಾಸ್ಟಿಕ್ ಬಳಕೆ ಬೇಡ: ಎಲೆಗಳಿಂದ ಪ್ಲೇಟ್ ತಯಾರಿಸಿ ಜನಮನ ಗೆದ್ದ ಮಹಿಳಾ ಸ್ವಸಹಾಯ ಗುಂಪು - ಗಮನ ಸೆಳೆದ ಸ್ವಸಹಾಯ ಗುಂಪು
ದೇಶಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ. ಒಡಿಶಾದ ಮಹಿಳಾ ಸ್ವಸಹಾಯ ಗುಂಪೊಂದು ಎಲೆಗಳಿಂದ ಪ್ಲೇಟ್ ತಯಾರಿಸಿ ಪರಿಸರ ಸಂರಕ್ಷಣೆಯ ಸೇವೆ ಮಾಡುತ್ತಿದೆ.
![ಪ್ಲಾಸ್ಟಿಕ್ ಬಳಕೆ ಬೇಡ: ಎಲೆಗಳಿಂದ ಪ್ಲೇಟ್ ತಯಾರಿಸಿ ಜನಮನ ಗೆದ್ದ ಮಹಿಳಾ ಸ್ವಸಹಾಯ ಗುಂಪು Plastic ban a boon to rural women](https://etvbharatimages.akamaized.net/etvbharat/prod-images/768-512-5338916-thumbnail-3x2-wdfdfdf.jpg)
ಸಂಬಲ್‌ಪುರದ ಸ್ವಸಹಾಯ ಮಹಿಳಾ ಗುಂಪು ಜಿಲ್ಲಾಡಳಿತದ ಸಹಾಯದಿಂದ ರೆಂಗಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಾಲ್ ಎಲೆಗಳಿಂದ ಪ್ಲೇಟ್ ತಯಾರಿಸುತ್ತಿದ್ದು, ಅವುಗಳನ್ನು ಸಾರ್ವಜನಿಕರ ಬಳಕೆಗೆ ನೀಡುತ್ತಿದೆ. ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಮಹಿಳಾ ಸಂಘಟನೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಬಿಸಿಲಿನಲ್ಲಿ ಹಸಿರೆಲೆ ಒಣಗಿಸಿ, ಹೊಲಿಗೆ ಯಂತ್ರಗಳಿಂದ ಅವುಗಳನ್ನು ಬಟ್ಟಲುಗಳ ರೀತಿಯಲ್ಲಿ ಹೆಣೆಯಲಾಗುತ್ತದೆ. ಈ ರೀತಿ ಪ್ರತಿದಿನ ಮಹಿಳೆಯರು 100 ಪ್ಲೇಟ್ ತಯಾರಿಸುತ್ತಿದ್ದು, ಯಂತ್ರಗಳ ಸಹಾಯದಿಂದ ಹೆಚ್ಚು ಬಟ್ಟಲು ತಯಾರು ಮಾಡುತ್ತಿದ್ದಾರೆ. ಹೀಗೆ ತಯಾರಾಗುತ್ತಿರುವ ಪ್ರತಿ ಪ್ಲೇಟ್‌ಗೆ ರೂ 3.50 ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ಮುಕ್ತ ಪರಿಸರದ ಅಭಿಯಾನಕ್ಕಾಗಿ ಈ ಮಹಿಳಾ ಸ್ವಸಹಾಯ ಗುಂಪು ಮಹತ್ವದ ಕೊಡುಗೆ ನೀಡಿ ಮಾದರಿಯಾಗಿದೆ.