ಕರ್ನಾಟಕ

karnataka

ETV Bharat / bharat

ವೃದ್ಧ ಮಹಿಳೆಯ ಮೃತದೇಹದ ಬಳಿ ಬಂದು ಕೂತ ಕೋತಿಗಳು! - ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೋತಿಗಳ ವಿಡಿಯೋ

ಎರಡು ಗಂಟೆಗಳ ಕಾಲ ಕೋತಿಗಳು ಮಹಿಳೆಯ ಮೃತದೇಹದ ಸುತ್ತಲೂ ಕುಳಿತಿದ್ದವು. ಬಳಿಕ ಮಂಗವೊಂದು ಮೃತದೇಹದ ಬಳಿಯೇ ಕುಳಿತುಕೊಂಡಿತ್ತು. ಕೋತಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

monkey
monkey

By

Published : Oct 3, 2020, 8:05 AM IST

Updated : Oct 3, 2020, 9:18 AM IST

ಉತ್ತರ ಪ್ರದೇಶ:ಜಿಲ್ಲೆಯಪ್ರತಾಪ್​ಗಢದ ಲಾಲ್​ಗಂಜ್​ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲ್ಹಾ ಗ್ರಾಮದಲ್ಲಿ ವೃದ್ಧ ಮಹಿಳೆಯೊಬ್ಬರ ಅಂತ್ಯಕ್ರಿಯೆಗೂ ಮುನ್ನ ಕೋತಿಗಳ ಗುಂಪು ಕಾಣಿಸಿಕೊಂಡಿದೆ.

ಮಹಿಳೆಯ ಸಂಬಂಧಿಕರು ದುಃಖಿಸುತ್ತಿದ್ದಂತೆ ಕೆಲವು ಕೋತಿಗಳು ಮನೆಯೊಳಗೆ ಪ್ರವೇಶಿಸಿ, ಕುಟುಂಬದ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸುವಂತೆ ಕಾಣಿಸುತ್ತಿತ್ತು.

ಮೃತದೇಹದ ಬಳಿ ಬಂದು ಕೂತ ಕೋತಿಗಳು

ಸ್ವಲ್ಪ ಸಮಯ ಅಲ್ಲೇ ಇದ್ದ ಕೋತಿಗಳು ಬಳಿಕ ಹೊರ ನಡೆದಿವೆ. ಕೋತಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪ್ರದೇಶದ ಇತರರು ಮೃತಪಟ್ಟಾಗ ಈ ಮೊದಲು ಹೀಗೆ ಕೋತಿಗಳು ಬಂದಿರೋದನ್ನು ನೋಡಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಎರಡು ಗಂಟೆಗಳ ಕಾಲ ಕೋತಿಗಳು ಮಹಿಳೆಯ ಮೃತದೇಹದ ಸುತ್ತಲೂ ಕುಳಿತಿದ್ದವು. ಬಳಿಕ ಮಂಗವೊಂದು ಮೃತದೇಹದ ಬಳಿಯೇ ಕುಳಿತುಕೊಂಡಿತ್ತು.

ಈ ವಿಷಯದ ಕುರಿತು ಮಾಹಿತಿ ಪಡೆದ ಬಳಿಕ ಜನಸಮೂಹವೇ ಸ್ಥಳದಲ್ಲೇ ಜಮಾಯಿಸಿತ್ತು.

Last Updated : Oct 3, 2020, 9:18 AM IST

ABOUT THE AUTHOR

...view details