ಮುಂಬೈ: ಸೋಮವಾರ ಸಂಜೆ ದಂಪತಿಗಳ ನಡುವಿನ ಗಲಾಟೆಯಿಂದಾಗಿ ಮುಂಬೈನ ಪೆಡ್ಡಾರ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ನಡೆಯಿತು.
ಗಂಡ ಹೆಂಡತಿ ಜಗಳಕ್ಕೆ ಬಡವಾದ ರಸ್ತೆ: ಟ್ರಾಫಿಕ್ ಜಾಮ್ಗೆ ಮಹಾನಗರಿ ಜನ ಸುಸ್ತೋ ಸುಸ್ತು!- ವಿಡಿಯೋ
ವ್ಯಕ್ತಿಯೊಬ್ಬ ಕಪ್ಪು ಕಾರಿನಲ್ಲಿ ಮಹಿಳೆಯೊಂದಿಗೆ ಹೊರಟಿದ್ದ. ಮತ್ತೊಂದೆಡೆ ಬಿಳಿ ಕಾರಿನಲ್ಲಿ ಪತ್ನಿ ತನ್ನ ಗಂಡನ ಕಾರನ್ನು ಓವರ್ ಟೇಕ್ ಮಾಡಿ ನಡು ರಸ್ತೆಯಲ್ಲೇ ನಿಲ್ಲಿಸಿ ತಪಾಸಣೆ ನಡೆಸಿದ್ದಾಳೆ. ಗಂಡನ ವಿರುದ್ಧ ಜಗಳಕ್ಕೆ ಬಿದ್ದಿದ್ದಾಳೆ.
ಗಂಡ ಹೆಂಡತಿ ಜಗಳ
ವ್ಯಕ್ತಿಯೊಬ್ಬ ಕಪ್ಪು ಕಾರಿನಲ್ಲಿ ಮಹಿಳೆಯೊಂದಿಗೆ ಹೊರಟಿದ್ದ. ಮತ್ತೊಂದೆಡೆ ಬಿಳಿ ಕಾರಿನಲ್ಲಿ ಪತ್ನಿ ತನ್ನ ಗಂಡನ ಕಾರನ್ನು ಓವರ್ ಟೇಕ್ ಮಾಡಿ ನಡು ರಸ್ತೆಯಲ್ಲೇ ನಿಲ್ಲಿಸಿ ತಪಾಸಣೆ ನಡೆಸಿದ್ದಾಳೆ. ಗಂಡ ಪರಸ್ತ್ರೀ ಜತೆ ಹೊರಟಿರುವುದನ್ನ ಕಂಡು ಕೆಂಡಾಮಂಡಲಳಾಗಿದ್ದಾಳೆ. ರಸ್ತೆಯಲ್ಲಿ ನಿಲ್ಲಿಸಿ ಗಂಡನ ಜತೆ ಜಗಳಕ್ಕೆ ಬಿದ್ದು ರಂಪಾಟ ನಡೆಸಿದ್ದಾಳೆ.
ಇದರಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರು ಜಗಳ ಬಿಡಿಸಿ, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.