ಕರ್ನಾಟಕ

karnataka

ETV Bharat / bharat

ಕೇರಳದ ಕೊರೊನಾ ಕ್ರಮಗಳನ್ನು ಹಾಡಿ ಹೊಗಳಿದ ಅಮೆರಿಕದ ವಾಷಿಂಗ್ಟನ್​ ಪೋಸ್ಟ್ ಪತ್ರಿಕೆ - ದೇಶದಲ್ಲಿ ಕೊರೊನಾ

ಕೇರಳದಲ್ಲಿ 30,000 ಆರೋಗ್ಯ ಕಾರ್ಯಕರ್ತರು ಕೊರೊನಾ ಸೋಂಕಿತ ರೋಗಿಗಳು ಹಾಗೂ ಕ್ವಾರಂಟೈನ್​​ನಲ್ಲಿದ್ದವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಪ್ರತಿ ಮನೆ ಮನೆಗೂ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದು, ತಪ್ಪದೇ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರಿಗೆ ಸೂಕ್ತ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ. ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಈ ಎಲ್ಲಾ ಅಂಶಗಳು ವಾಷಿಂಗ್ಟನ್​ ಪೋಸ್ಟ್​ ವರದಿಯಲ್ಲಿವೆ.

Washington Post sing praises of Kerala model
Washington Post sing praises of Kerala model

By

Published : Apr 13, 2020, 1:30 PM IST

ತಿರುವನಂತಪುರಂ(ಕೇರಳ):ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣ ಮೊದಲು ಕಾಣಿಸಿಕೊಂಡಿದ್ದು ದೇವರ ನಾಡು ಕೇರಳದಲ್ಲಿ. ಆದರೀಗ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಕುತೂಹಲಕಾರಿ ಸಂಗತಿ ಏನೆಂದರೆ, ವೈರಸ್​ ಕಾಣಿಸಿಕೊಂಡಿದ್ದವರ ಪೈಕಿ ಶೇ.50ರಷ್ಟು ರೋಗಿಗಳು ಈಗಾಗಲೇ ಗುಣಮುಖರಾಗಿದ್ದಾರೆ.

ಕೇರಳದಲ್ಲಿ ಕೊರೊನಾ ತಡೆಗಟ್ಟಲು ಕೈಗೊಂಡ ಮುನ್ನೆಚ್ಚೆರಿಕಾ ಕ್ರಮಗಳು ಅಮೆರಿಕದ ಪ್ರತಿಷ್ಟಿತ ದಿನಪತ್ರಿಕೆ ದಿ ವಾಷಿಂಗ್ಟನ್​ ಪೋಸ್ಟ್​​ನಲ್ಲೂ ಪ್ರಕಟಗೊಂಡಿವೆ. ಕೊರೊನಾ ತಡೆಗಟ್ಟಲು ತೆಗೆದುಕೊಂಡ ಸರ್ಕಾರದ ಮಹತ್ವದ ನಿರ್ಧಾರಗಳು ಮ್ತತು ಅವುಗಳ ಅನುಷ್ಠಾನಕ್ಕೆ ತೆಗೆದುಕೊಂಡ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳದಲ್ಲಿ 30,000 ಆರೋಗ್ಯ ಕಾರ್ಯಕರ್ತರು, ಕೊರೊನಾ ರೋಗಿಗಳು ಹಾಗೂ ಕ್ವಾರಂಟೈನ್​​ನಲ್ಲಿದ್ದವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇದರ ಜತೆಗೆ ಪ್ರತಿ ಮನೆಗೂ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದು, ತಪ್ಪದೇ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಬೇರೆ ಬೇರೆ ರಾಜ್ಯದ ವಲಸೆ ಕಾರ್ಮಿಕರಿಗೆ ಸೂಕ್ತ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ. ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಈ ಎಲ್ಲಾ ವಿಚಾರಗಳು ವಾಷಿಂಗ್ಟನ್​ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ​ ವರದಿಯಲ್ಲಿವೆ.

ರಾಜಯದಲ್ಲಿ ನಿನ್ನೆ ಕೇವಲ ಎರಡು ಕೊರೊನಾ ಸೋಂಕಿತ​ ಪ್ರಕರಗಳು ಕಾಣಿಸಿಕೊಂಡಿದ್ದು, 36 ಮಂದಿಯ ವರದಿ ನೆಗೆಟಿವ್​ ಆಗಿ ಬಂದಿದೆ. ಇಲ್ಲಿಯವರೆಗೆ 375 ಜನರಿಗೆ ಕೋವಿಡ್​-19 ಕಾಣಿಸಿಕೊಂಡಿದ್ದು, ಅದರಲ್ಲಿ 179 ಗುಣಮುಖರಾಗಿ ಆಸ್ಪತ್ರೆಯಿಂದ ನಗು ತುಂಬಿಕೊಂಡು ಮನೆಗೆ ತೆರಳಿದ್ದಾರೆ.

ಇನ್ನುಳಿದಂತೆ 194 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಮೂವರು ಸಾವನ್ನಪ್ಪಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,16,941 ಜನರನ್ನು ಮನೆಯಲ್ಲೇ ಕ್ವಾರಂಟೈನ್​​ ಮಾಡಲಾಗಿದೆ. ಒಟ್ಟು 14,989 ಜನರ ರಕ್ತದ ಮಾದರಿ ಪರೀಕ್ಷೆಗೆ ರವಾನಿಸಲಾಗಿದೆ. ಈಗಾಗಲೇ ಬಂದಿರುವ 13,802 ಜನರ ರಕ್ತದ ಮಾದರಿ ನೆಗೆಟಿವ್​ ಆಗಿದ್ದು ಆಂತಕ ದೂರವಾಗಿದೆ.

ABOUT THE AUTHOR

...view details