ಕರ್ನಾಟಕ

karnataka

ETV Bharat / bharat

ಬಿಜೆಪಿ ನಾಯಕನ ಹತ್ಯೆಗೆ ಪೂರ್ವಯೋಜಿತ ದಾಳಿ ನಡೆಸಿದ ಎಲ್​ಇಟಿ - 10 personal security officers (PSOs) deployed

ಶ್ರೀನಗರದ ಬಂಡಿಪೋರಾದ ಬಿಜೆಪಿ ನಾಯಕ ವಾಸಿಂ​​​ ಬ್ಯಾರಿ ಮತ್ತು ಆತನ ಕುಟುಂಬ ಸದಸ್ಯರನ್ನು ಎಲ್​ಇಟಿ ಭಯೋತ್ಪಾದಕರು ಪೂರ್ವನಿಯೋಜಿತ ಹಾಗೂ ವ್ಯವಸ್ಥಿತ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Waseem Bari's killing at Kashmir
ಕಾಶ್ಮೀರದ ಶ್ರೇಣಿಯ ಐಜಿಪಿ ವಿಜಯ್​​ ಕುಮಾರ್​

By

Published : Jul 9, 2020, 2:16 PM IST

ಶ್ರೀನಗರ:ಇಲ್ಲಿನ ಬಂಡಿಪೋರಾದ ಬಿಜೆಪಿ ನಾಯಕ ವಾಸಿಂ​​​ ಬ್ಯಾರಿ ಮತ್ತು ಆತನ ಕುಟುಂಬ ಸದಸ್ಯರ ಹತ್ಯೆಗೆ ಲಷ್ಕರ್–ಇ-ತೊಯ್ಬಾ (ಎಲ್​​ಇಟಿ) ಭಯೋತ್ಪಾದಕರು ಪೂರ್ವಯೋಜಿತ ದಾಳಿ ನಡೆಸಿದ್ದಾರೆ ಎಂದು ಕಾಶ್ಮೀರ್​ ರೇಂಜ್​​​​ನ ಐಜಿಪಿ ವಿಜಯ್​​ ಕುಮಾರ್​ ಗುರುವಾರ ಹೇಳಿದರು.

ಹತ್ಯೆಗೀಡಾದ ನಾಯಕನ ರಕ್ಷಣೆಗಾಗಿ ನಿಯೋಜಿಸಲಾದ 10 ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು (ಪಿಎಸ್ಒ) ಅವರನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಐಜಿಪಿ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಈ ಹೇಳಿಕೆ ನೀಡಿದ್ದಾರೆ.

ವಾಸಿಂ ಬಾರಿ, ಅವರ ತಂದೆ ಬಹಿರ್‌ ಅಹ್ಮದ್‌ ಬಾರಿ ಮತ್ತು ಸೋದರ ಉಮರ್‌ ಬಾರಿ ಅವರು ಕೊಲೆಯಾಗಿದ್ದಾರೆ. ಬಿಜೆಪಿ ನಾಯಕನ ಮನೆಯ ಎದುರಿಗೆ ಇರುವ ಪೊಲೀಸ್​​​ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಐಜಿಪಿ ನೇತೃತ್ವದ ಪೊಲೀಸ್ ತಂಡವು ಪರಿಶೀಲಿಸಿತು.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಉಗ್ರರು ಈ ದಾಳಿಯನ್ನು ನಡೆಸಿದ್ದಾರೆ. ಒಬ್ಬರು ಸ್ಥಳೀಯರಾಗಿದ್ದು, ಅವರನ್ನು ಅಬಿದ್ ಹಕ್ಕಾನಿ ಮತ್ತು ಇನ್ನೊಬ್ಬರು ವಿದೇಶಿಯರು ಎಂದು ಗುರುತಿಸಲಾಗಿದೆ. ಅಬಿದ್​​​ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರೆ, ಮತ್ತೊಬ್ಬ ಸೂಚನೆ ನೀಡುತ್ತಿದ್ದ. ಇಬ್ಬರನ್ನೂ ಕೂಡಲೇ ಬಂದಿಸಲಾಗುವುದು ಎಂದು ಕುಮಾರ್​ ಹೇಳಿದರು.

ABOUT THE AUTHOR

...view details