ಕರ್ನಾಟಕ

karnataka

ETV Bharat / bharat

ಆಂಧ್ರ ಗ್ರಾಪಂ ಚುನಾವಣಾ ದಿನಾಂಕ ಪ್ರಕಟ : ಆಯೋಗದ ವಿರುದ್ಧ ಜಗನ್​​ ಸರ್ಕಾರ ಕಿಡಿ - Andhra local polls news

ಈ ಕುರಿತು ಕೃಷಿ ಸಚಿವ ಕುರಸಾಲ ಕನ್ನಬಾಬು ಆಯುಕ್ತ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಕೊಳ್ಳಲು ಈ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಜನತೆಯ ಜೀವವನ್ನು ಅವರು ಅಪಾಯಕ್ಕೆ ತಂದೊಡ್ಡಲಿದ್ದಾರೆ..

war-of-words-as-andhra-sec-announces-rural-local-polls-schedule
ಆಯೋಗದ ವಿರುದ್ಧ ಜಗನ್​​ ಸರ್ಕಾರ ಕಿಡಿ

By

Published : Jan 9, 2021, 7:04 PM IST

ಅಮರಾವತಿ (ಆಂಧ್ರ ಪ್ರದೇಶ) :ಆಂಧ್ರದ ಸ್ಥಳೀಯ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೆ ಆಂಧ್ರ ಸರ್ಕಾರ ಮತ್ತು ಚುನಾವಣಾ ಆಯುಕ್ತರ ನಡುವೆ ಮಾತಿನ ಸಮರ ಏರ್ಪಟ್ಟಿದೆ.

ಏಕಪಕ್ಷೀಯವಾಗಿ ಪಂಚಾಯತ್‌ ಚುನಾವಣಾ ದಿನಾಂಕ ನಿಗದಿ ಮಾಡಲಾಗಿದೆ ಎಂದು ಸರ್ಕಾರ ಆರೋಪಿಸಿ ವಾಕ್ಸಮರ ನಡೆಸಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಆದಿತ್ಯ ನಾಥ್ ದಾಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡು, ವೈರಸ್ ನಿಯಂತ್ರಿಸಿದ ಬಳಿಕ ಚುನಾವಣೆ ನಡೆಸಬಹುದು ಎಂದಿದ್ದಾರೆ.

ಅರ್ಧದಲ್ಲಿಯೇ ನಿಂತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಕೊರೊನಾ ಸಂಪೂರ್ಣ ನಿಯಂತ್ರಣ ಮತ್ತು ಲಸಿಕೆ ವಿತರಣೆ ಮುಕ್ತಾಯವಾದ ಬಳಿಕ ನಡೆಸುವುದು ಉತ್ತಮ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಮನವಿಯನ್ನು ಆಯೋಗ ಪುರಸ್ಕರಿಸಬೇಕು ಎಂದಿದ್ದಾರೆ.

ಈ ಕುರಿತು ಕೃಷಿ ಸಚಿವ ಕುರಸಾಲ ಕನ್ನಬಾಬು ಆಯುಕ್ತ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಕೊಳ್ಳಲು ಈ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಜನತೆಯ ಜೀವವನ್ನು ಅವರು ಅಪಾಯಕ್ಕೆ ತಂದೊಡ್ಡಲಿದ್ದಾರೆ ಎಂದಿದ್ದಾರೆ.

ಅಲ್ಲದೆ ಕೊರೊನಾ ಹೆಚ್ಚುತ್ತಿದ್ದ ಸಮಯದಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಆದರೆ, ಲಸಿಕೆ ಹಾಗೂ ಕೊರೊನಾ 2ನೇ ಅಲೆಯ ವೇಳೆ ಆಯೋಗ ದಿನಾಂಗ ಘೋಷಿಸಿದೆ. ಕೆಲವು ಸಿಟಿಗಳಲ್ಲಿ ಕರ್ಪ್ಯೂ ಸಹ ಇದೆ. ಇದನ್ನು ನೋಡಿದ್ರೆ ಈ ನಿರ್ಧಾರದ ಹಿಂದೆ ವೈಯಕ್ತಿಕ ಕಾರಣವಿದೆ ಇಲ್ಲವೆ ಯಾರದ್ದೋ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಎಐಎಡಿಎಂಕೆಯ ಪಳನಿಸ್ವಾಮಿಯನ್ನೇ ಸಿಎಂ ಅಭ್ಯರ್ಥಿಯಾಗಿ ಅಂಗೀಕರಿಸಿದ್ ಕೌನ್ಸಿಲ್​

ABOUT THE AUTHOR

...view details