ಕರ್ನಾಟಕ

karnataka

By

Published : Sep 17, 2020, 5:49 PM IST

ETV Bharat / bharat

ಭಾರತದಲ್ಲೆ ತಯಾರಾದ ಅತ್ಯಂತ ಶಕ್ತಿಶಾಲಿ ರೈಲ್ವೆ ಇಂಜಿನ್​​​​ ಸದ್ಯದಲ್ಲೇ ಸೇವೆಗೆ ಲಭ್ಯ

ಮೇಡ್​ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ WAG12 ಹೆಸರಿನ ಲೋಕೊಮೋಟಿವ್ ಇಂಜಿನ್​ ಭಾರತದ ಈವರೆಗಿನ ಶಕ್ತಿಶಾಲಿ ರೈಲ್ವೆ ಇಂಜಿನ್​ ಎನಿಸಿಕೊಂಡಿದೆ. ಇದಲ್ಲದೆ ಸುಮಾರು 150 ರೈಲ್ವೆ ಬೋಗಿಗಳನ್ನು ಎಳೆಯುವ ಸಾಮರ್ಥ್ಯ ಈ ಇಂಜಿನ್​ ಹೊಂದಿರಲಿದ್ದು, ಈಗಿರುವ ಸಾಮಾನ್ಯ ಇಂಜಿನ್​ಗಳಿಗಿಂತ ಹೆಚ್ಚು ಬಲಶಾಲಿ ಹಾಗೂ ವೇಗ ಹೊಂದಿದೆ.

WAG-12, India's most powerful locomotive arrives at Hisar
ಭಾರತದಲ್ಲೆ ತಯಾರಾದ ಅತ್ಯಂತ ಶಕ್ತಿಶಾಲಿ ರೈಲ್ವೆ ಇಂಜಿನ್​​ ಸದ್ಯದಲ್ಲೇ ಸೇವೆಗೆ ಲಭ್ಯ

ನವದೆಹಲಿ: ಅತ್ಯಂತ ಶಕ್ತಿಶಾಲಿ ಲೋಕೊಮೋಟಿವ್​ ರೈಲು ಇಂಜಿನ್​​​ ಅನ್ನು ಭಾರತದಲ್ಲಿಯೇ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಭಾರತೀಯ ರೈಲ್ವೆಗೆ ಸೇರ್ಪಡೆಗೊಳ್ಳಲಿದೆ. 12,000 ಹೆಚ್​​​ಪಿ ಸಾಮರ್ಥ್ಯದ ಇಂಜಿನ್​ ಇದಾಗಿರಲಿದ್ದು, ಹರಿಯಾಣದ ಹಿಸಾರ್​ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.

ಮೇಡ್​ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ WAG12 ಹೆಸರಿನ ಲೋಕೊಮೋಟಿವ್ ಇಂಜಿನ್​ ಭಾರತದ ಈವರೆಗಿನ ಶಕ್ತಿಶಾಲಿ ರೈಲ್ವೆ ಇಂಜಿನ್​ ಎನಿಸಿಕೊಂಡಿದೆ. ಇದಲ್ಲದೆ ಸುಮಾರು 150 ರೈಲ್ವೆ ಬೋಗಿಗಳನ್ನು ಎಳೆಯುವ ಸಾಮರ್ಥ್ಯ ಈ ಇಂಜಿನ್​ ಹೊಂದಿರಲಿದ್ದು, ಈಗಿರುವ ಸಾಮಾನ್ಯ ಇಂಜಿನ್​ಗಳಿಗಿಂತ ಹೆಚ್ಚು ಬಲಶಾಲಿ ಹಾಗೂ ವೇಗ ಹೊಂದಿದೆ.

ಭಾರತದಲ್ಲೆ ತಯಾರಾದ ಅತ್ಯಂತ ಶಕ್ತಿಶಾಲಿ ರೈಲ್ವೆ ಇಂಜಿನ್​​​​ ಸದ್ಯದಲ್ಲೇ ಸೇವೆಗೆ ಲಭ್ಯ

ಮೇಡ್​​​ ಇನ್ ಇಂಡಿಯಾ ಯೋಜನೆಯಡಿ ಬಿಹಾರದ ಮೇಧಾಪುರ ಕೈಗಾರಿಕಾ ಘಟಕದಲ್ಲಿ ಇಂಜಿನ್​ ನಿರ್ಮಿಸಲಾಗಿದ್ದು, 800ಕ್ಕೂ ಹೆಚ್ಚು ಲೋಕೊ ಇಂಜಿನ್​​​​ಗಳನ್ನು ಬೆಂಗಳೂರಿನ ಇಂಜಿನಿಯರಿಂಗ್ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಇನ್ನೂ ಈ ನೂತನ ಇಂಜಿನ್​ ಚಾಲನೆಗಾಗಿ ಈಗಾಗಲೇ ಲೋಕೊ ಪೈಲೆಟ್​​​​​ಗಳಿಗೆ ತರಬೇತಿ ನೀಡಲಾಗುತ್ತಿದ್ದು, ಈ ಇಂಜಿನ್​​​​ಗಳ ತಯಾರಿಕೆಯ ಕುರಿತ ತಂತ್ರಜ್ಞಾನದ ಮಾಹಿತಿಯನ್ನೂ ಅವರಿಗೆ ಕಲಿಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಹಿಸಾರ್ ರೈಲು ನಿಲ್ದಾಣದ ಅಧಿಕಾರಿ ಕೆ.ಎಲ್​ ಚೌಧರಿ, WAG12 ಲೋಕೊ ಇಂಜಿನ್​ 180 ಟನ್​​​​ನಷ್ಟು ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಅಲ್ಲದೆ ಗಂಟೆಗೆ 100ರಿಂದ 120 ಕಿಲೋ ಮೀಟರ್​ ವೇಗದಲ್ಲಿ ಚಲಿಸಲಿದೆ ಎಂದಿದ್ದಾರೆ.

ABOUT THE AUTHOR

...view details