ಕರ್ನಾಟಕ

karnataka

ETV Bharat / bharat

ಇಂದು ಮಹಾರಾಷ್ಟ್ರ-ಹರಿಯಾಣ ಚುನಾವಣೆ ಫಲಿತಾಂಶ... 8 ಗಂಟೆಯಿಂದ ಮತ ಎಣಿಕೆ ಆರಂಭ

ಮಹರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ.21ರಂದು ಮತದಾನ ನಡೆದಿತ್ತು. ಮಹಾರಾಷ್ಟ್ರದಲ್ಲಿ ಒಟ್ಟು 3,237 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಹರಿಯಾಣದ ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಇಂದು ಇಷ್ಟೂ ಜನರ ಭವಿಷ್ಯ ಸಂಜೆ ವೇಳೆಗೆ ಹೊರಬೀಳಲಿದೆ.

By

Published : Oct 24, 2019, 5:52 AM IST

Updated : Oct 24, 2019, 7:21 AM IST

Vote counting

ಹೈದರಾಬಾದ್​:ಅ.21ರಂದು ನಡೆದಿದ್ದ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಇಂದು ನಡೆಯಲಿದ್ದು, ಮಹಾರಾಷ್ಟ್ರದ 3,237 ಹಾಗೂ ಹರಿಯಾಣದ 1,169 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅ.21ರಂದು ಮತದಾನ ನಡೆದಿತ್ತು. ಮಹಾರಾಷ್ಟ್ರದಲ್ಲಿ ಒಟ್ಟು 3,237 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಹರಿಯಾಣದ ಒಟ್ಟು 1169 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಇಂದು ಇಷ್ಟೂ ಜನರ ಭವಿಷ್ಯ ಸಂಜೆ 5ರ ವೇಳೆಗೆ ಹೊರಬೀಳಲಿದೆ.

2014 ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 122, ಶಿವಸೇನೆ 63 ಕಾಂಗ್ರೆಸ್​ 42, ಎನ್​ಸಿಪಿ 41 ಸ್ಥಾನಪಡೆದಿದ್ದವು. 122 ಸ್ಥಾನ ಪಡೆದ ಬಿಜೆಪಿ 15 ವರ್ಷಗಳ ನಂತರ ಮತ್ತೆ ಅಧಿಕಾರ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯೂ ಸಹ ಬಿಜೆಪಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ತಿಳಿಸಿದ್ದರೂ ಮತದಾರ ಪ್ರಭುವಿನ ತೀರ್ಪು ಏನಿದೆ ಎಂಬುದು ಇಂದು ತಿಳಿಯಲಿದೆ.

ಇನ್ನು ಹರಿಯಾಣದಲ್ಲೂ 2014ರಲ್ಲಿ ಚೊಚ್ಚಲ ಬಾರಿಗೆ ಕಮಲ ಅರಳಿದ್ದು 90 ಸ್ಥಾನಗಳ ಪೈಕಿ 47ರಲ್ಲಿ ಗೆಲುವು ಸಾಧಿಸಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು. ಈ ವರ್ಷವೂ ಹರಿಯಾಣದಲ್ಲಿ ಕೂಡ ಬಿಜೆಪಿ ಪಾರುಪತ್ಯ ಮುಂದುವರಿಯಲಿದೆಯಾ ಎಂದು ಕಾದು ನೋಡಬೇಕಿದೆ.

ಎರಡೂ ರಾಜ್ಯಗಳ ಮತ ಎಣಿಕೆ ಕಾರ್ಯ 8 ಗಂಟೆಯಿಂದ ಆರಂಭವಾಗಲಿದ್ದು ಸಂಜೆ 5 ಗಂಟೆಯ ವೇಳೆಗೆ ಫಲಿತಾಂಶ ಹೊರಬೀಳಲಿದೆ.

Last Updated : Oct 24, 2019, 7:21 AM IST

ABOUT THE AUTHOR

...view details