ನವದೆಹಲಿ : 2ನೇ ಅವಧಿಗೆ ಕೇಂದ್ರದ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಎಲ್ಲ ರೀತಿಯ ಸರ್ಕಸ್ ನಡೆಸುತ್ತಿದೆ. ಅದಕ್ಕಾಗಿ ಈಗಾಗಲೇ ಅಬ್ಬರದ ಪ್ರಚಾರ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ, ಪ್ರಧಾನಿ ನರೇಂದ್ರ ಮೋದಿ ತವರು ನಾಡು ಗುಜರಾತ್ಗಾಗಿ 40 ಸ್ಟಾರ್ ಕ್ಯಾಂಪೇನರ್ ಪಟ್ಟಿ ರಿಲೀಸ್ ಮಾಡಿದೆ.
ಗುಜರಾತ್ಗೆ ಬಿಜೆಪಿ ಸ್ಟಾರ್ ಕ್ಯಾಂಪೇನರ್ಸ್ ರಿಸ್ಟ್ ಫೈನಲ್.. ಬಿಟೌನ್ ನಟ ವಿವೇಕ್ ಓಬೇರಾಯ್ ಆಕರ್ಷಣೆ - ನಟ ವಿವೇಕ್ ಓಬೇರಾಯ್
ಗುಜರಾತ್ನ 26 ಸಂಸದೀಯ ಕ್ಷೇತ್ರಗಳಿಗಾಗಿ ನಟ ವಿವೇಕ್ ಓಬೇರಾಯ್ ಸೇರಿ 40 ಸ್ಟಾರ್ ಕ್ಯಾಂಪೇನರ್ ಲಿಸ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಗುಜರಾತ್ನ 26 ಸಂಸದೀಯ ಕ್ಷೇತ್ರಗಳಿಗಾಗಿ ನಟ ವಿವೇಕ್ ಓಬೇರಾಯ್ ಸೇರಿ 40 ಸ್ಟಾರ್ ಕ್ಯಾಂಪೇನರ್ ಲಿಸ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖವಾಗಿ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಪಟ್ಟಿಯಲ್ಲಿದ್ದಾರೆ.
ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ನಲ್ಲಿ ನಟನೆ ಮಾಡಿರುವ ಬಾಲಿವುಡ್ ನಟ ವಿವೇಕ್ ಓಬೇರಾಯ್ ಈ ಲಿಸ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2014ರ ಲೋಕಸಭಾ ಚುನಾವಣೆ ವೇಳೆ ಕೂಡ ಓಬೇರಾಯ್ ಕ್ಯಾಂಪೇನ್ ನಡೆಸಿದ್ದರು.