ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ವಿಶ್ವ-ಭಾರತಿ ಶತಮಾನೋತ್ಸವದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸದೇ, ತಪ್ಪಿಸಿಕೊಂಡಿದ್ದಾರೆ. ಮಮತ ಬ್ಯಾನರ್ಜಿಗೆ ತಡವಾಗಿ ಆಹ್ವಾನ ಬಂದಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೊಂಡಿದೆ.
"ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಮತ್ತೊಂದೆಡೆ ವಿಶ್ವ-ಭಾರತಿ ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಹೇಳಿಕೆಯನ್ನು ತಳ್ಳಿಹಾಕಿದ್ದು, 20 ದಿನಗಳ ಹಿಂದೆಯೇ ಆಹ್ವಾನ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಮಮತಾ ಬ್ಯಾನರ್ಜಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ದೂಷಿಸಿದೆ.
"ವಿಶ್ವ ಭಾರತಿ ಡಿಸೆಂಬರ್ 4ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ಆಹ್ವಾನ ಕಳುಹಿಸಿದ್ದರು. ಆದರೆ, ಅವರಿಗೆ ರವೀಂದ್ರನಾಥ ಟ್ಯಾಗೋರ್ಗಿಂತ ರಾಜಕೀಯ ಮುಖ್ಯವಾಗಿದೆ. ಇದು ಸಂಕುಚಿತ ಮನೋಭಾವವನ್ನು ತೋರುತ್ತದೆ" ಎಂದು ಮಾಲ್ವಿಯಾ ಟ್ವೀಟ್ ಮಾಡಿದ್ದಾರೆ.
"ಮಮತಾ ಬ್ಯಾನರ್ಜಿ ವಿಶ್ವ-ಭಾರತಿಯ ಶತಮಾನೋತ್ಸವಗಳನ್ನು ಬಹಿಷ್ಕರಿಸಿದ್ದು, ಇದು ಅವರ ರಾಜಕೀಯ ಅಸೂಯೆ ಮತ್ತು ಪೈಪೋಟಿಯನ್ನು ತೋರುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.