ಕರ್ನಾಟಕ

karnataka

ETV Bharat / bharat

ನಿರ್ಣಯ ತಿದ್ದುಪಡಿ ಆರೋಪ: ಮೂವರು ಅಧಿಕಾರಿಗಳನ್ನು ಹೊರಹಾಕಿದ ವಿಶ್ವ ಭಾರತಿ ವಿವಿ! - ಮೂವರು ಅಧಿಕಾರಿಗಳನ್ನು ಹೊರಹಾಕಿದ ವಿಶ್ವ ಭಾರತಿ ವಿವಿ

ವಿಶ್ವವಿದ್ಯಾನಿಲಯದ ಕಾರ್ಯನಿರ್ವಾಹಕ ಮಂಡಳಿಯ ನಿರ್ಣಯವನ್ನು ತಿದ್ದುಪಡಿ ಮಾಡಿದ ಆರೋಪದ ಮೇಲೆ ವಿಶ್ವ ಭಾರತಿ ವಿಶ್ವವಿದ್ಯಾಲಯವು ಉಪಕುಲಪತಿ ಸಾಬುಜ್‌ಕಲಿ ಸೇನ್ ಸೇರಿದಂತೆ ಮೂವರು ಅಧಿಕಾರಿಗಳನ್ನು ಉಚ್ಛಾಟಿಸಿದೆ.

Visva Bharati University expels three officials
ಮೂವರು ಅಧಿಕಾರಿಗಳನ್ನು ಹೊರಹಾಕಿದ ವಿಶ್ವ ಭಾರತಿ ವಿವಿ

By

Published : Aug 31, 2020, 12:46 PM IST

Updated : Aug 31, 2020, 1:06 PM IST

ಕೋಲ್ಕತಾ: ಇಸಿ ಸಭೆಯಲ್ಲಿ ಸಭೆಯ ನಡಾವಳಿಗಳನ್ನು ದಾಖಲಿಸುವ ಪುಸ್ತಕದಲ್ಲಿನ ರೆಸಲ್ಯೂಶನ್ ರೆಕಾರ್ಡಿಂಗ್ ಹಾಳು ಮಾಡಿದ ಆರೋಪದ ಮೇಲೆ ವಿಶ್ವ ಭಾರತಿ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿ, ಆಗಸ್ಟ್ 30ರಂದು ಉಪಕುಲಪತಿ ಸಾಬುಜ್‌ಕಲಿ ಸೇನ್, ಮಾಜಿ ರಿಜಿಸ್ಟ್ರಾರ್ ಸೌಗತಾ ಚಟ್ಟೋಪಾಧ್ಯಾಯ ಮತ್ತು ಮಾಜಿ ಹಣಕಾಸು ಅಧಿಕಾರಿ ಸಮಿತ್ ರೇ ಅವರನ್ನು ಹೊರಹಾಕಿದೆ.

ಆದರೆ ಸಾಬುಜ್‌ಕಲಿ ಸೇನ್ ಅವರು ವಿಶ್ವವಿದ್ಯಾಲಯದ ನಿಯಮಕ್ಕೆ ವಿರುದ್ಧವಾಗಿ ತಾವು ಏನೂ ಮಾಡಿಲ್ಲ ಎಂದು ಹೇಳಿದ್ದಾರೆ.

ಪ್ರತೀಕಾರದಿಂದಾಗಿ ಹೀಗೆ ಮಾಡಲಾಗಿದೆ. ನನ್ನ ವಿರುದ್ಧದ ಒಂದು ಆರೋಪವೂ ನಿಜವಲ್ಲ. ಆರ್ಥಿಕ ಭ್ರಷ್ಟಾಚಾರದ ಆರೋಪಗಳು ಸಹ ಸುಳ್ಳು. ಈಗಿನ ಕೇಂದ್ರ ಶಿಕ್ಷಣ ಸಚಿವಾಲಯ ಎಂದು ಕರೆಯಲ್ಪಡುವ ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನನ್ನ ಅಧಿಕಾರಾವಧಿಯನ್ನು ಪತ್ರದ ಮೂಲಕ ವಿಸ್ತರಿಸಿತು. ನನ್ನ ಅವಧಿ ಮುಗಿಯುತ್ತಿದೆ ಎಂದು ತಿಳಿಸಿದ ನಂತರ ನನಗೆ ಮತ್ತೆ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಪತ್ರವೊಂದನ್ನು ನೀಡಲಾಯಿತು. ಶಾಶ್ವತ ಉಪಕುಲಪತಿ ಬರುವವರೆಗೂ ನಾನು ಉಸ್ತುವಾರಿ ವಹಿಸಿಕೊಳ್ಳುತ್ತೇನೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ವರದಿಗಳ ಪ್ರಕಾರ, ವಿಶ್ವ ಭಾರತಿ ಕಾರ್ಯಕಾರಿ ಮಂಡಳಿಯ ತೀರ್ಪಿನ ವಿರುದ್ಧ ಅವರು ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Last Updated : Aug 31, 2020, 1:06 PM IST

ABOUT THE AUTHOR

...view details