ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ನಿಂದ ಬೇರೆಡೆ ಸಿಲುಕಿದ ಅಂಧ ಮಹಿಳೆ ಕುಟುಂಬ... ಒಬ್ಬಂಟಿಯಾಗಿದ್ದವಳ ಮೇಲೆ ಕಾಮುಕನ ಅಟ್ಟಹಾಸ​ - ಮಧ್ಯಪ್ರದೇಶದ ಭೋಪಾಲ್​ನ ಶಾಪುರ

ಒಂದೆಡೆ ಕೋವಿಡ್​ 19 ಲಾಕ್​ಡೌನನಿಂದಾಗಿ ಅಂಧ ಮಹಿಳೆಯೊಬ್ಬರ ಕುಟುಂಬ ರಾಜಸ್ಥಾನದಲ್ಲಿ ಸಿಲುಕಿಕೊಂಡಿದ್ದರೆ, ಇತ್ತ ಮಧ್ಯಪ್ರದೇಶದಲ್ಲಿ ಒಂಟಿಯಾಗಿದ್ದ ಆಕೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದಿದ್ದಾನೆ.

Visually impaired woman raped in MP
ಅಂಧ ಮಹಿಳೆ ಮೇಲೆ ಅತ್ಯಾಚಾರ

By

Published : Apr 18, 2020, 11:26 AM IST

ಭೋಪಾಲ್​(ಮಧ್ಯ ಪ್ರದೇಶ): 53 ವರ್ಷದ ಅಂಧ ಮಹಿಳೆ ಮೇಲೆ ಕಾಮುಕನೋರ್ವ ಮನೆಗೆ ನುಗ್ಗಿ ಅಟ್ಟಹಾಸ ಮೆರೆದಿರುವ ಘಟನೆ ಭೋಪಾಲ್​ನ ಶಾಪುರ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.

ಸಂತ್ರಸ್ತೆ ಬ್ಯಾಂಕ್​ ಉದ್ಯೋಗಿಯಾಗಿದ್ದು, ಆಕೆಯ ಪತಿ ಮತ್ತು ಕುಟುಂಬಸ್ಥರು ಕೋವಿಡ್-​ 19 ಲಾಕ್​ಡೌನ್​ನಿಂದಾಗಿ ರಾಜಸ್ಥಾನದಲ್ಲಿ ಸಿಲುಕಿಕೊಂಡಿದ್ದಾರೆ. ಮನೆಯಲ್ಲಿ ಮಹಿಳೆ ಮಲಗಿರುವ ವೇಳೆ ಆಕೆಯ ರೂಂಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ತನ್ನ ಮೇಲೆ ನಡೆದಿರುವ ಈ ದುಷ್ಕೃತ್ಯದ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಸ್ಪಿ ಸಂಜಯ್​ ಸಾಹು, ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇವೆ. ಆರೋಪಿಯ ಕುರಿತು ಯಾವ ಸುಳಿವು ಸಿಕಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಶಾಪುರ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 356 ಮತ್ತು 377ರ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details