ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ಸಂಕಷ್ಟ: ನೌಕರರ ವೇತನ ಕಡಿತ ಘೋಷಿಸಿದ ''ವಿಸ್ತಾರಾ'' - ಕೊರೊನಾ ಎಫೆಕ್ಟ್

ವಿಸ್ತಾರಾ ಏರ್​ಲೈನ್ಸ್​ ಲಾಕ್​ಡೌನ್​ನಿಂದ ನಷ್ಟಕ್ಕೆ ಒಳಗಾಗಿದ್ದು, ಜುಲೈನಿಂದ ಡಿಸೆಂಬರ್​ವರೆಗೆ ತನ್ನ ನೌಕರರ ವೇತನ ಕಡಿತಗೊಳಿಸಲು ನಿರ್ಧರಿಸಿದೆ.

Vistara airlines
ವಿಸ್ತಾರಾ ಏರ್​ಲೈನ್ಸ್

By

Published : Jun 30, 2020, 5:29 PM IST

ನವದೆಹಲಿ:ದೇಶದಲ್ಲಿ ಲಾಕ್​ಡೌನ್ ಕಾರಣದಿಂದ ಆದಾಯ ಕುಂಠಿತವಾಗಿದ್ದು, ವಿಸ್ತಾರಾ ಏರ್​ಲೈನ್ಸ್​ ಕಂಪನಿ ತನ್ನ ಉದ್ಯೋಗಿಗಳ ವೇತನದ ಶೇಕಡಾ 5ರಿಂದ ಶೇಕಡಾ 20ರಷ್ಟು ವೇತನ ಕಡಿತಗೊಳಿಸುವುದಾಗಿ ಘೋಷಣೆ ಮಾಡಿದೆ.

ಈ ವೇತನ ಕಡಿತ ಡಿಸೆಂಬರ್​​ವರೆಗೆ ಮುಂದುವರೆಯಲಿದ್ದು, ಕಂಪನಿ ಪರಿಗಣಿಸಿರುವ ಸುಮಾರು 4 ಸಾವಿರ ಉದ್ಯೋಗಿಗಳ ವೇತನದ ಮೇಲೆ ಇದು ಪರಿಣಾಮ ಬೀರಲಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯ ನೀಡಿರುವ ವಿಸ್ತಾರಾ ಏರ್​ಲೈನ್ಸ್ ವಕ್ತಾರ ವೇತನ ಕಡಿತ ಶೇಕಡಾ 60ರಷ್ಟು ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಸ್ತಾರಾ ಕಾರ್ಯನಿರ್ವಹಣಾಧಿಕಾರಿ ಲೆಸ್ಲಿ ಥಂಗ್​ ನೌಕರರಿಗೆ ಇಮೇಲ್​ ಸಂದೇಶ ಕಳಿಸಿದ್ದು, ಜುಲೈ ಒಂದನೇ ತಾರೀಖಿನಿಂದ ಡಿಸೆಂಬರ್ 31ರವರೆಗೆ ಉದ್ಯೋಗಿಗಳ (ಪೈಲೆಟ್​ಗಳನ್ನು ಹೊತರುಪಡಿಸಿ) ಶೇಕಡಾ 20ರಷ್ಟು ವೇತನ ಕಡಿತ ಮಾಡುತ್ತಿದ್ದೇವೆ. ನಾಲ್ಕು ಮತ್ತು ಐದನೇ ಹಂತದ ಸಿಬ್ಬಂದಿಗೆ ಶೇಕಡಾ 15ರಷ್ಟು, ಮೂರನೇ ಹಾಗೂ ಎರಡನೇ ಹಂತದ ಮತ್ತು 1ಸಿ ಹಂತದ ಲೈಸೆನ್ಸ್​ ಇರುವ ಇಂಜಿನಿಯರ್​​ಗಳ ವೇತನದ ಶೇಕಡಾ 10ರಷ್ಟು ಹಾಗೂ 1ನೇ ಹಂತದ ಉದ್ಯೋಗಿಗಳ, ಅದರಲ್ಲೂ 50 ಸಾವಿರ ಹಾಗೂ ಅದಕ್ಕೂ ಹೆಚ್ಚು ವೇತನವಿರುವ ಉದ್ಯೋಗಿಗಳ ಶೇಕಡಾ 5ರಷ್ಟು ವೇತನ ಕಡಿತ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಪೈಲೆಟ್​ಗಳ ವಿಮಾನ ಹಾರಾಟ ಭತ್ಯೆಯನ್ನು ಮಾಸಿಕವಾಗಿ ಕಡಿತಗೊಳಿಸಲಾಗುತ್ತದೆ. ಜೊತೆಗೆ ತರಬೇತಿಯಲ್ಲಿರುವ ಪೈಲೆಟ್​ಗಳಿಗೆ ಕೂಡಾ ಇದು ಅನ್ವಯಿಸುತ್ತದೆ ಎಂದು ವಿಸ್ತಾರಾ ಕಾರ್ಯನಿರ್ವಹಣಾಧಿಕಾರಿ ಲೆಸ್ಲಿ ಥಂಗ್ ಹೇಳಿದ್ದಾರೆ.

ಸದ್ಯಕ್ಕೆ ವಿಸ್ತಾರಾ ಏರ್ಲೈನ್ಸ್​ ತನ್ನ ಹಾರಾಟ ಜಾಲದ ಶೇಕಡಾ 30ರಷ್ಟು ಪ್ರದೇಶಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಸುತ್ತಿದೆ. ಕೊರೊನಾ ಹಾಗೂ ಲಾಕ್​ಡೌನ್ ಕಾರಣಕ್ಕೆ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿರುವ ಕಾರಣದಿಂದ ಈ ವಿಮಾನಯಾನ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಜೊತೆಗೆ ಎಲ್ಲಾ ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಸವಾಲು ಹೊಂದಿದ್ದು, ವೆಚ್ಚ ಕಡಿತಕ್ಕೂ ಅನೇಕ ಕ್ರಮಗಳನ್ನು ಕೈಗೊಂಡಿದೆ.

ABOUT THE AUTHOR

...view details