ಅಹಮದಾಬಾದ್: ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಈ ಮನವಿಗೆ ನಾನಾ ಕ್ಷೇತ್ರಗಳ ಜನರು ಸ್ಪಂದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳೆ ಮಾರಾಟವಾಗದೆ ಸಂಕಷ್ಟದಲ್ಲಿರುವ ರೈತರೂ ಕೂಡಾ ಹಿಂದೆ ಬಿದ್ದಿಲ್ಲ. ನಮೋ ಕರೆಗೆ ಓಗೊಟ್ಟ ಗುಜರಾತ್ನ ಅಮ್ರೇಲಿ ಜಿಲ್ಲೆಯ ಇನ್ನೂರಕ್ಕೂ ಹೆಚ್ಚು ರೈತರು ಪಿಎಂ ಕೇರ್ಸ್ ನಿಧಿಗೆ ತಲಾ 2 ಸಾವಿರ ರೂ ನೀಡುತ್ತಿದ್ದಾರೆ.
ಲಾಕ್ಡೌನ್ ಸಂಕಷ್ಟದ ಮಧ್ಯೆಯೂ ಪಿಎಂ ಕೇರ್ಸ್ ನಿಧಿಗೆ ಗುಜರಾತ್ ರೈತರ ದೇಣಿಗೆ
ಪ್ರಧಾನಿ ಮೋದಿ ಮನವಿಗೆ ಸ್ಪಂದಿಸಿ ಅನೇಕರು ಪಿಎಂ ಕೇರ್ಸ್ ನಿಧಿಗೆ ಉದಾರವಾಗಿ ದೇಣಿಗೆ ನೀಡುತ್ತಿದ್ದು, ರೈತರು ಕೂಡ ಕೈಜೋಡಿಸುತ್ತಿದ್ದಾರೆ.
Virus: Over 200 Guj farmers give Rs 2k
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ತಾವು ಪಡೆದುಕೊಂಡಿರುವ 2 ಸಾವಿರ ರೂ ಪಿಎಂ ಕೇರ್ಸ್ ನಿಧಿಗೆ ನೀಡಲು ಅವರು ನಿರ್ಧರಿಸಿದ್ದಾರೆ.