ಲಿಮಾ(ಬ್ರೆಜಿಲ್) :ಕೊರೊನಾದಿಂದ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯಗಳು ಜನ ಬಾರದೇ ನಷ್ಟ ಅನುಭವಿಸುತ್ತಿದ್ದು, ಅಲ್ಲಿರುವ ಮೂಕ ಪ್ರಾಣಿಗಳಿಗೆ ಆಹಾರ ಒದಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಗ್ರಹಾಲಯದ ಮಾಲೀಕರು ದಾನಿಗಳ ಮೊರೆ ಹೋಗಿದ್ದಾರೆ.
ಲಾಕ್ಡೌನ್ನಿಂದ ಮೃಗಾಲಯಗಳಿಗೆ ಜನರು ಬರದ ಕಾರಣ ನಮಗೆ ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಇಲ್ಲಿಯವರೆಗೆ ನಮ್ಮಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುತ್ತಿದ್ದು, ಮುಂದಿನ ಎರಡು ವಾರಗಳ ಕಾಲ ಆಹಾರ ಒದಗಿಸಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಮುಂದಿನ ದಿನಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ತುಂಬಾನೇ ಕಷ್ಟಕರವಾಗಿದೆ. ಹಾಗಾಗಿ ದಾನಿಗಳಿಂದ ನೆರವು ಪಡೆಯಲು ಯೋಚಿಸಲಾಗಿದೆ ಎಂದು ಅಮೆಜಾನ್ ಮೃಗಾಲಯದ ವ್ಯವಸ್ಥಾಪಕರು ತಿಳಿಸಿದರು.