ಶ್ರೀನಗರ: ಪುಲ್ವಾಮ ದಾಳಿಕೋರರು ನಿರಂತರ ಸಂಪರ್ಕದಲ್ಲಿರಲು ಅಮೆರಿಕ ನಿರ್ಮಿತ ವರ್ಚುಯಲ್ ಸಿಮ್ಗಳನ್ನು ಬಳಸುತ್ತಿದ್ದರು ಎಂದು ತನಿಖಾ ಸಂಸ್ಥೆಗಳಿಗೆ ತಿಳಿದುಬಂದಿದೆ. ಈ ಹಿನ್ನೆಲೆ ಅಗತ್ಯ ಮಾಹಿತಿ ಒದಗಿಸುವಂತೆ ಭಾರತ ಅಮೆರಿಕವನ್ನು ಕೋರಿದೆ.
ದಾಳಿ ನಡೆದ ಸ್ಥಳ ಸೇರಿ ಅಲ್ಲಲ್ಲಿ ತೀವ್ರವಾಗಿ ತನಿಖೆ ನಡೆಸಿದ ಜಮ್ಮು ಮತ್ಯು ಕಾಶ್ಮೀರದ ಪೊಲೀಸರಿಗೆ ಹಾಗೂ ಕೇಂದ್ರ ಭದ್ರತಾ ಏಜೆನ್ಸಿಗಳಿಗೆ ಆತ್ಮಾಹುತಿ ದಾಳಿ ನಡೆಸಿದ ಆದಿಲ್ ದರ್ ಹಾಗೂ ಗಡಿಯಲ್ಲಿದ್ದ ಜೈಷೆ ಮೊಹಮ್ಮದ್ನ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಇದಕ್ಕಾಗಿ ವರ್ಚುಯಲ್ ಸಿಮ್ಗಳನ್ನೇ ಅವರು ಬಳಸುತ್ತಿದ್ದರು. ಅಮೆರಿಕದಲ್ಲಿ ಈ ರೀತಿಯ ಸೇವೆ ಒದಗಿಸುತ್ತಿರುವವರಿಂದಲೇ ಇವು ತಯಾರಾದವು ಎನ್ನಲಾಗಿದೆ.
ಈ ತಂತ್ರಜ್ಞಾನದ ಮೂಲಕ ಕಂಪ್ಯೂಟರ್ನಲ್ಲಿ ಟೆಲಿಫೋನ್ ನಂಬರ್ಗಳನ್ನು ಸೃಷ್ಟಿಸಬಹುದು. ಹಾಗೂ ಈ ಸೇವೆ ಒದಗಿಸುವವರಿಂದ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಅಪ್ಲಿಕೇಷನ್ ಸಹ ಡೌನ್ಲೋಡ್ ಮಾಡಬಹುದಾಗಿದೆ. ಇದೇ ನಂಬರ್ ಅನ್ನು ಸೋಶಿಯಲ್ ಮೀಡಿಯಾಗಳಾದ ವಾಟ್ಸಪ್, ಫೇಸ್ಬುಕ್, ಟೆಲಿಗ್ರಾಂ ಹಾಗೂ ಟ್ವಿಟ್ಟರ್ಗಳಿಗೆ ಸಹ ಲಿಂಕ್ ಮಾಡಬಹುದು.
ದಾಳಿಕೋರ ದರ್, ಸೂತ್ರದಾರ ಮದಸ್ಸಿರ್ ಖಾನ್ನೊಂದಿಗೆ ನಿರಂತರ ಸಂಪರ್ಕದಲ್ಲಿರುವ ಇದೇ ತಂತ್ರಜ್ಞಾನ ಬಳಸಿದ್ದನು ಎನ್ನಲಾಗಿದೆ. ಮೊಬೈಲ್ ಇಂಟರ್ನ್ಯಾಷನಲ್ ಸಬ್ಸ್ಕ್ರೈಬರ್ ಡೈರೆಕ್ಟರಿ ನಂಬರ್ (MSISDN)ನಂತೆ “+1”ನಿಂದ ಆರಂಭವಾಗುವ ಸಂಖ್ಯೆ ಅಮೆರಿಕಾದ್ದಾಗಿದೆ. ಈ ಕಾರಣ ಅಮೆರಿಕಾಗೆ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.