ಶ್ರೀನಗರ:ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಬಹುತೇಕ ಸ್ಥಗಿತಗೊಳಿಸಿದೆ. ಭಾರತೀಯ ನ್ಯಾಯಾಲಯದ ನ್ಯಾಯ ವಿತರಣಾ ವ್ಯವಸ್ಥೆಯ ಮೇಲೂ ಸಹ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇದೀಗ ಅದಕ್ಕೊಂದು ಪರಿಹಾರ ಕಂಡುಹಿಡಿದಿದ್ದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದ್ದು, ಬಾಕಿ ಇರುವ ಅನೇಕ ಪ್ರಮುಖ ಪ್ರಕರಣಗಳನ್ನು ವರ್ಚುವಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ಅರ್ಜಿದಾರರು ಮತ್ತು ಪ್ರತಿವಾದಿಗಳು ಭಾಗವಹಿಸುವಿಕೆಯೊಂದಿಗೆ ಕಲಾಪ ನಡೆಸಲಾಗುತ್ತಿದೆ.
ನಿನ್ನೆ ನಡೆದ ವಿಚಾರಣೆಯಲ್ಲಿ, ಕಾಶ್ಮೀರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಮಿಯಾನ್ ಅಬ್ದುಲ್ ಕಯೂಮ್, ಆರೋಗ್ಯ ಕಾರಣ ನೀಡಿ ತನ್ನ ಬಿಡುಗಡೆಗಾಗಿ ಅರ್ಜಿಯನ್ನು ಸಲ್ಲಿಸಿದ ಪ್ರಕರಣದ ಪ್ರಮುಖ ನ್ಯಾಯಾಲಯದ ವಿಚಾರಣೆಗೆ ಸಾಕ್ಷಿಯಾಗುವ ಅಭೂತಪೂರ್ವ ಅವಕಾಶ ಈಟಿವಿ ಭಾರತ್‌ನ ಈ ವರದಿಗಾರನಿಗೆ ಸಿಕ್ಕಿತ್ತು. ಆರ್ಟಿಕಲ್ 370 ಮತ್ತು 35 ಎ ರದ್ದುಪಡಿಸಿದ ನಂತರದ ಬೆಳೆವಣಿಗೆಯಲ್ಲಿ ಕಳೆದ ವರ್ಷ ಅವರನ್ನ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧಿಸಲಾಗಿತ್ತು. ಈ ವರದಿಗಾರ ಈ ಹಿಂದೆ ಕೋರ್ಟ್ ಹಾಲ್ ನಲ್ಲಿ ಹಲವು ಪ್ರಕರಣಗಳ ವಿಚಾರಣೆಗೆ ಸಾಕ್ಷಿಯಾಗಿದ್ದಾರೇ. ಆದರೆ, ನಿನ್ನೆ ನಡೆದ ವರ್ಚುವಲ್ ಕೋರ್ಟ್ ಕಲಾಪದ ಅನುಭವವು ವಿಭಿನ್ನ ಮತ್ತು ಆಸಕ್ತಿದಾಯಕವಾಗಿತ್ತು ಎನ್ನುತ್ತಾರೆ.
ನನ್ನ ವರ್ಚುವಲ್ ಕೋರ್ಟ್ ಕಲಾಪದ ಸಂಪೂರ್ಣ ಅನುಭವವನ್ನು ಹಂಚಿಕೊಳ್ಳುವ ಮೊದಲು, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಬಳಸುತ್ತಿರುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೀಡಿಯೊ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಮಾಹಿತಿಯನ್ನ ನಾನು ನಿಮಗೆ ಕೊಡಲು ಇಚ್ಚಿಸುತ್ತೇನೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳಲು ಅಪ್ಲಿಕೇಶನ್ ಅನುಮತಿಸುತ್ತದೆ. ಹೀಗಾಗಿ, ಅರ್ಜಿದಾರರು ಮುಂಚಿತವಾಗಿ ವರ್ಚುವಲ್ ಕೋರ್ಟ್ ರೂಂಗೆ ನೋಂದಾಯಿಸಿಕೊಳ್ಳಬೇಕು.
ನಗರದಲ್ಲಿ ಎಲ್ಲೆಡೆ ಲಾಕ್ ಡೌನ್ ಇದೆ. ಹೀಗಾಗಿ, ಸದ್ಯ ನ್ಯಾಯಾಲಯದ ಕೊಠಡಿಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ, ವರ್ಚುಬವ್ಲ ಕೋರ್ಟ್ ರಾಮ್ ನಲ್ಲಿ ನಡೆಸಲಾಗುತ್ತಿದೆ. ಪ್ರಕರಣ ಕುರಿತಂತೆ ಅರ್ಜಿದಾರ ಅಥವಾ ಅವನ / ಅವಳ ಪರ ವಕೀಲರು ಜಮ್ಮು ಮತ್ತು ಕಾಶ್ಮೀರದ ರಿಜಿಸ್ಟ್ರಾರ್‌ಗೆ ವಿಚಾರಣೆಗೆ ಮುಂಚಿತವಾಗಿ ತಿಳಿಸಬೇಕು. ನಾವು ಪ್ರಕರಣಕ್ಕೆ ಸಂಬಂಧಪಟ್ಟ ನ್ಯಾಯಾಧೀಶರನ್ನ ಸಹ ಸಂಪರ್ಕಿಸಬಹುದು, ರೋಸ್ಟರ್ ಪ್ರಕಾರ, ವಿಚಾರಣೆಗೆ ಅನುಮತಿ ನೀಡಿದರೆ, ಪ್ರಕರಣದ ವಿಚಾರಣೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುತ್ತೆ "ಎಂದು ಮಿಯಾನ್ ಕಯೂಮ್ ಅವರ ಲೀಗಲ್ ಟೀಮ್ ನಲ್ಲಿರುವ ವಕೀಲ ಮಿಯಾನ್ ತುಫೈಲ್ ಅಹ್ಮದ್ ವಿವರಿಸಿದರು.
"ವಿಚಾರಣೆಯನ್ನ ವಿಡಿಯೋ ಅಥವಾ ಕಾಲ್ ಕಾನ್ಫರೆನ್ಸಿಂಗ್ ಮೂಲಕ ನಡೆಸಬೇಕೇ ಎಂಬುದು ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಕಯೂಮ್ ಸರ್ ಪ್ರಕರಣದಲ್ಲಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಅವಕಾಶ ನೀಡಲಾಗಿದೆ. ಕೆಲವೊಮ್ಮೆ ನೆಟ್ವರ್ಕ್ ಕಳಪೆ ಆಗಿ ಇರುವುದರಿಂದ ವಿಚಾರಣೆಯ ಸಮಯ ಮರು ನಿಗದಿಯಾಗುತ್ತದೆ. ಹಿಂದಿನ ವಿಚಾರಣೆಗಳಲ್ಲೂ ನಾವು ಅಂತಹ ಸಂದರ್ಭಗಳನ್ನು ಎದುರಿಸಿದ್ದೇವೆ." ಎನ್ನುತ್ತಾರೆ ವಕೀಲ ಮಿಯಾಮ್.
ನ್ಯಾಯಾಲಯದ ಕಲಾಪದ ವೇಳೆ ಸಾಕ್ಷಿಯಾಗಲು ಪತ್ರಕರ್ತರು ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, "ಹೈಕೋರ್ಟ್ ಇತ್ತೀಚಿಗೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಪತ್ರಕರ್ತರು" ವರದಿ ಮಾಡಬಹುದಾದ "ಪ್ರಕರಣದಲ್ಲಿ ಮಾತ್ರ ವಿಚಾರಣೆಯ ಭಾಗವಾಗಬಹುದು. ಆದರೆ, ಅವರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಕೋರ್ಟ್ ಕಲಾಪ ರೆಕಾರ್ಡ್ ಮಾಡಲು ಅವಕಾಶ ನೀಡುವುದಿಲ್ಲ. ಬದಲಿಗೆ, ಆಡಿಯೋ ಮತ್ತು ಇನ್ನಿತರೇ ಮಾಹಿತಿಯನ್ನ ರೆಕಾರ್ಡ್ ಮಾಡಬಹುದು. ಇದರ ಜೊತೆಗೆ, ಕೋವಿಡ್-೧೯ ಕೊರೋನಾ ವಿರುಸ ತಡೆಗೆ ವಿಧಿಸಲಾಗಿರುವ ಸಾಮಾಜಿಕ, ದೈಹಿಕ ಅಂತರ ಸೇರಿದಂತೆ ಎಲ್ಲ ನಿಯಮಾವಳಿ, ಮಾನದಂಡಗಳು ಅನ್ವಯವಾಗುತ್ತವೆ. ಭೌತಿಕ ನ್ಯಾಯಾಲಯದ ಎಲ್ಲಾ ನಿಯಮಗಳು ಅನ್ವಯವಾಗುತ್ತವೆ. ಆದರೆ, ವರ್ಚುವಲ್ ಮೋಡ್‌ನಲ್ಲಿ ಕೋರ್ಟ್ ಕಲಾಪ ನಡೆಯುತ್ತದೆ. "
ನ್ಯಾಯಾಲಯದ ಪ್ರಕ್ರಿಯೆಗಳು
ಮಿಯಾನ್ ಅಬ್ದುಲ್ ಕಯೂಮ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಣೆಯನ್ನು ನ್ಯಾಯಮೂರ್ತಿ ಅಲಿ ಮುಹಮ್ಮದ್ ಮ್ಯಾಗ್ರೇ ಮತ್ತು ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈ ಹಿಂದೆ ಮೇ 18 ರಂಡೆ ವಿಚಾರಣೆ ಪೂರ್ಣಗೊಳಿಸಿತ್ತು. ನಿನ್ನೆ ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟಿಸಲು ಸಮಯ ನಿಗದಿ ಮಾಡಲಾಗಿತ್ತು.
ಕಣಿವೆ ರಾಜ್ಯದ ಇಬ್ಬರು ಪತ್ರಕರ್ತರ ಜೊತೆಗೆ ಈಟಿವಿ ಭಾರತ್ ವರದಿಗಾನನ್ನ ತೀರ್ಪು ಪ್ರಕಟಣೆಯ ಕಲಾಪ ವರದಿಗಾರಿಕೆಗೆ ಮಿಯಾನ್ ಕಯೂಮ್ ಕಾನೂನು ತಂಡದ ವಕೀಲರೊಬ್ಬರು ಆಹ್ವಾನ ನೀಡಿದ್ದರು. ವಕೀಲರ ನಿವಾಸದ ವಾತಾವರಣ ಮತ್ತು ಅಲ್ಲಿನ ಅನುಭವ ನಿಜಕ್ಕೂ ವರದಿಗಾರಿಕೆಯ ಅತ್ಯುತ್ತಮ ಕ್ಷಣವಾಗಿತ್ತು, ಮನೆಯೆಲ್ಲ ವರ್ಚುವಲ್ ಕೋರ್ಟ್ ರೂಂ ಆಗಿ ಮಾರ್ಪಟ್ಟಿದೆ. ವಕೀಲರು ಮತ್ತು ನ್ಯಾಯಾಧೀಶರು ಕಪ್ಪು ಕೋಟುಗಳು ಮತ್ತು ಗೌನ್ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ರೀತಿಯೇ ಹಾಜರಿದ್ದರು. ಒಂದೇ ವ್ಯತ್ಯಾಸವೆಂದರೆ ಹಾರ್ಡ್ ಡಿಸ್ಕ್ ಗಳು ಮತ್ತು ದಾಖಲೆಗಳ ದೊಡ್ಡ ಹಾರ್ಡ್‌ಕಾಪಿಗಳ ಬದಲಿಗೆ ಪೆನ್ ಡ್ರೈವ್‌ಗಳು ಇಲ್ಲಿ ಬಳಸಲಾಗಿತ್ತು.
ಇನ್ನೇನು ವೀಡಿಯೊ ಅಪ್ಲಿಕೇಶನ್ ಆನ್ ಮಾಡಿದ ಕ್ಷಣ ಹತ್ತಿರವಾಗುತ್ತಿದ್ದಂತೆ ಇಂಟರ್ನೆಟ್ ವೇಗದ ಬಗ್ಗೆ ಹಿರಿಯ ವಕೀಲರು ಆತಂಕಗೊಂಡಿದ್ದರು, ಏಕೆಂದರೆ, ಕಳೆದ ಬಾರಿ ಹಲವಾರು ಬಾರಿ ಪ್ರಯತ್ನಗಳ ಹೊರತಾಗಿಯೂ ಅಪ್ಲಿಕೇಶನ್ ಅನ್ನು ಲೋಡ್ ಮಾಡಲು ಸಾಧ್ಯವಾಗದ ಕಾರಣ ವಿಚಾರಣೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಆದರೆ, ಈ ಬಾರಿಯೂ ಸಹ ಮೂರರಿಂದ ನಾಲ್ಕು ಭಾರೀ ಪ್ರಯತ್ನಗಳ ನಂತರವೇ ವಿಡಿಯೋ ಅಪ್ಲಿಕೇಶನ್ ವಿಚಾರಣೆಗೆ ಸಿದ್ದವಾಗಿತ್ತು. ಫೋನ್‌ಗಳನ್ನು ಫ್ಲೈಟ್ ಮೋಡ್‌ನಲ್ಲಿ ಇರಿಸಲು ಮತ್ತು ತೀರ್ಪು ಉಚ್ಚರಿಸುವಾಗ ಅಗತ್ಯವಾದ ಅಂತರ ಮತ್ತು ಮೌನವನ್ನು ಕಾಪಾಡಿಕೊಳ್ಳಲು ನಮಗೆ ತಿಳಿಸಲಾಯಿತು.
'ಒನ್ ಸ್ಕ್ರೀನ್, 10 ವಿಂಡೋಗಳು'