ಮುಂಬೈ: ರನ್ ಮಷಿನ್ ವಿರಾಟ್ ಕೊಹ್ಲಿಗೆ ಈಗ ಮುಟ್ಟಿದ್ದೆಲ್ಲ ಚಿನ್ನ. ಆಡಿದ ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಸೃಷ್ಟಿಯಾಗುತ್ತಲೇ ಇದೆ. ಕಿಂಗ್ ಕೊಹ್ಲಿ ಬ್ಯಾಟ್ ಹಿಡಿದು ಕ್ರೀಸ್ಗೆ ಬಂದರೆ ರನ್ ಹೊಳೆಯ ಜೊತಗೆ ಹಲವು ದಾಖಲೆಗಳು ಕೂಡಾ ಸೇರಿಕೊಳ್ಳುತ್ತ ಹೋಗುತ್ತಿವೆ. ಟೀಮ್ ಇಂಡಿಯಾ ಸದ್ಯ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದೆ. 5 ಪಂದ್ಯಗಳ ಟಿ-20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಮೊದಲ ಪಂದ್ಯದಲ್ಲಿ 45 ರನ್ಗಳಿಸಿ ತಂಡದ ಗೆಲವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಕೊಹ್ಲಿಯಿಂದ ನಿರೀಕ್ಷಿತ ಆಟ ಬರಲಿಲ್ಲ ಕೇವಲ 11 ರನ್ಗಳಿಸಿ ನಿರಾಸೆ ಮೂಡಿಸಿದ್ದರು.
ಈ ಕಿಂಗ್ ಬ್ಯಾಟ್ಸ್ಮನ್ ಮುಟ್ಟಿದ್ದೆಲ್ಲ ಚಿನ್ನ.... ಹೊಸ ಇತಿಹಾಸ ಬರೆಯಲು ಅಣಿ - ಬುಧವಾರ 3ನೇ ಟಿ20 ಆಡಲು ಹೊರಟ ವಿರಾಟ್ ಕೊಹ್ಲಿ
ಬುಧವಾರ ನಡೆಯಲಿರುವ 3ನೇ ಟಿ-20ಯಲ್ಲಿ ಕೊಹ್ಲಿ 25 ರನ್‌ಗಳನ್ನು ಗಳಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ.
ಆದರೆ, ನಾಳೆ ನಡೆಯಲಿರುವ 3ನೇ ಟಿ-20ಯಲ್ಲಿ ಕೊಹ್ಲಿ ಇನ್ನು 25 ರನ್‌ಗಳನ್ನು ಗಳಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಟೀಮ್ ಇಂಡಿಯಾ ಪರ ನಾಯಕನಾಗಿ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕಿಂಗ್ ಕೊಹ್ಲಿ ಮುಡಿಗೇರಲಿದೆ. ಸದ್ಯ ಈ ದಾಖಲೆ ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಸರಲ್ಲಿದೆ. ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಕ್ಯಾಪ್ಟನ್ ಡು'ಪ್ಲೆಸಿಸ್ (1,273) ಅಗ್ರಸ್ಥಾನದಲ್ಲಿದ್ದರೆ, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ (1148) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನೂ ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ (1112) ಈ ಪಟ್ಟಿಯಲ್ಲಿ ತೃತೀಯ ಸ್ಥಾನ ಅಲಂಕರಿಸಿದ್ದಾರೆ. ಕೊಹ್ಲಿ (1087) ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ಟಿ-20ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ.
ಇದೇ ವೇಳೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ದಾಖಲೆಯನ್ನು ಫಾಫ್ ಡು'ಪ್ಲೆಸಿಸ್ ಮತ್ತು ಕೇನ್ ವಿಲಿಯಮ್ಸನ್ ಜೊತೆಗೆ ಹಂಚಿಕೊಂಡಿರುವ ಕೊಹ್ಲಿ, ಇನ್ನೊಂದು ಅರ್ಧಶತಕ ಬಾರಿಸಿದರೆ ನಾಯಕನಾಗಿ ತಮ್ಮ ಒಟ್ಟು ಅರ್ಧಶತಗಳ ಸಂಖ್ಯೆಯನ್ನು 9 ಕ್ಕೆ ಏರಿಸಿಕೊಳ್ಳಲಿದ್ದಾರೆ.