ನವದೆಹಲಿ: 1999ರಲ್ಲಿ ಪಾಕಿಸ್ತಾನದ ವಿರುದ್ಧ ಸಾಧಿಸಿದ್ದ ಗೆಲುವಿನ ಐತಿಹಾಸಿಕ ಕಾರ್ಗಿಲ್ ಯುದ್ಧದ 20ನೇ ವಿಜಯ್ ದಿವಸ್ ಅನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಮರಿಸಿದ್ದಾರೆ.
ಕಾರ್ಗಿಲ್ ವಿಜಯ್ ದಿನ: ಯೋಧರ ತ್ಯಾಗವನ್ನ ಎಂದೂ ಮರೆಯಲ್ಲ ಎಂದ ಕ್ಯಾಪ್ಟನ್ ಕೊಹ್ಲಿ -
ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ನೀವು ನಮಗಾಗಿ ಮಾಡಿದ ಎಲ್ಲ ತ್ಯಾಗಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಗೌರವ, ಪ್ರೀತಿ, ನಮಸ್ಕಾರ' ಎಂದು ಬರೆದುಕೊಂಡು ಯೋಧರ ತ್ಯಾಗ ಮನೋಭಾವನೆ ಶ್ಲಾಘಿಸಿದ್ದಾರೆ.
![ಕಾರ್ಗಿಲ್ ವಿಜಯ್ ದಿನ: ಯೋಧರ ತ್ಯಾಗವನ್ನ ಎಂದೂ ಮರೆಯಲ್ಲ ಎಂದ ಕ್ಯಾಪ್ಟನ್ ಕೊಹ್ಲಿ](https://etvbharatimages.akamaized.net/etvbharat/prod-images/768-512-3950753-thumbnail-3x2-kohli.jpg)
ಸಾಂದರ್ಭಿಕ ಚಿತ್ರ
ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ನೀವು ನಮಗಾಗಿ ಮಾಡಿದ ಎಲ್ಲ ತ್ಯಾಗಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಗೌರವ, ಪ್ರೀತಿ, ನಮಸ್ಕಾರ' ಎಂದು ಬರೆದುಕೊಂಡು ಯೋಧರ ತ್ಯಾಗ ಮನೋಭಾವನೆಯನ್ನು ಶ್ಲಾಘಿಸಿದ್ದಾರೆ.
ಹುತಾತ್ಮ ಯೋದ ಸೌರಬ್ ಕಾಲಿಯಾ ತಂದೆ ಎನ್.ಕೆ. ಕಾಲಿಯಾ ಮಾತನಾಡಿ, 'ಉರಿ ಮತ್ತು ಪುಲ್ವಾಮಾ ದಾಳಿ ಹಾಗೂ ಐಎಎಫ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ವಶಪಡಿಸಿಕೊಂಡ ಬಳಿಕ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ, 1999ರಲ್ಲಿ ತೆಗದುಕೊಂಡಿದ್ದರೇ ಪಾಕ್ ನಮ್ಮ ಸೈನಿಕರನ್ನು ಅಮಾನುಷವಾಗಿ ನೋಡಿಕೊಳ್ಳತ್ತಿರಲಿಲ್ಲ ಎಂದು ಹೇಳಿದ್ದಾರೆ.