ಕರ್ನಾಟಕ

karnataka

ETV Bharat / bharat

ಟಿ20ಯಲ್ಲಿ ಟೀಂ ಇಂಡಿಯಾ ಹೊಸ ದಾಖಲೆ​: ಅತಿ ದೊಡ್ಡ ಸ್ಕೋರ್​​ ಬೆನ್ನಟ್ಟಿ ಗೆದ್ದ ಕೊಹ್ಲಿ ಪಡೆ! - Highest targets chased down by India

ವೆಸ್ಟ್​ ಇಂಡೀಸ್​ ವಿರುದ್ಧದ ಮೂರು ಟಿ-20 ಪಂದ್ಯಗಳ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ.

india vs west indies 1st t20 match
ಕೆಎಲ್​ ರಾಹುಲ್​ ಬ್ಯಾಟಿಂಗ್​

By

Published : Dec 6, 2019, 11:22 PM IST

Updated : Dec 6, 2019, 11:49 PM IST

ಹೈದರಾಬಾದ್​​:ಟಿ-20 ಕ್ರಿಕೆಟ್​​ನಲ್ಲಿ ಟೀಂ ಇಂಡಿಯಾ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದ್ದು, ನೂತನ ದಾಖಲೆ ನಿರ್ಮಿಸಿದೆ. ಹೈದರಾಬಾದ್​​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ ಈ ಸಾಧನೆ ಮಾಡಿದೆ.

ಕ್ಯಾಪ್ಟನ್​ ಕೊಹ್ಲಿ ಸಂಭ್ರಮ

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ವೆಸ್ಟ್​ ಇಂಡೀಸ್​ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ​​ನಷ್ಟಕ್ಕೆ 207 ರನ್​ ಗಳಿಸಿತ್ತು. ಈ ಸ್ಕೋರ್‌ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್​ ಶರ್ಮಾ(8)ವಿಕೆಟ್​ ಕಳೆದುಕೊಂಡಿದೆ. ಮತ್ತೊಬ್ಬ ಆರಂಭಿಕ ಕೆ.ಎಲ್. ರಾಹುಲ್​​​(62) ಹಾಗೂ ನಾಯಕ ವಿರಾಟ್​ ಕೊಹ್ಲಿ ಅಜೇಯ (94) ರನ್​ಗಳ ನೆರವಿನಿಂದ 4 ವಿಕೆಟ್​ ಕಳೆದುಕೊಂಡು ಅಂತಿಮವಾಗಿ 18.4 ಓವರ್​​​ಗಳಲ್ಲಿ 209 ರನ್ ​ಗಳಿಸಿ ಗೆಲುವಿನ ನಗೆ ಬೀರಿತು.

ಆರ್ಭಟಿಸಿದ ಕನ್ನಡಿಗ ರಾಹುಲ್​​

ಈ ಗೆಲುವಿನ ಮೂಲಕ ಟೀಂ ಇಂಡಿಯಾ ಟಿ-20 ಕ್ರಿಕೆಟ್​​ನಲ್ಲಿ ಅತಿ ದೊಡ್ಡ ಸ್ಕೋರ್​​ ಬೆನ್ನಟ್ಟಿ ಗೆಲುವು ದಾಖಲಿಸಿದೆ.

ಕೊಹ್ಲಿ ಬ್ಯಾಟಿಂಗ್​ ವೈಖರಿ

ಟಿ-20ಯಲ್ಲಿ ಟೀಂ ಇಂಡಿಯಾ ಬೆನ್ನಟ್ಟಿದ ಅತಿದೊಡ್ಡ ಸ್ಕೋರ್​

  • 208 ವೆಸ್ಟ್​ ಇಂಡೀಸ್​ ವಿರುದ್ಧ ಹೈದರಾಬಾದ್​ 2019
  • 207 ಶ್ರೀಲಂಕಾ ವಿರುದ್ಧ ಮೊಹಾಲಿ 2009
  • 202 ಆಸ್ಟ್ರೇಲಿಯಾ ವಿರುದ್ಧ ರಾಜ್‌ಕೋಟ್​​ 2013
  • 199 ಇಂಗ್ಲೆಂಡ್​ ವಿರುದ್ಧ ಬ್ರಿಸ್ಟಲ್​​ 2018
  • 198 ಆಸ್ಟ್ರೇಲಿಯಾ ವಿರುದ್ಧ 2016
    ಕೊಹ್ಲಿ ಸಂಭ್ರಮ

ಟಿ-20 ಕ್ರಿಕೆಟ್​​ನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಗಳಿಸಿರುವ ಅತಿದೊಡ್ಡ ಸ್ಕೋರ್​​ ಇದಾಗಿದ್ದು, ಇಂದಿನ ಪಂದ್ಯದಲ್ಲಿ ಅಜೇಯ 94 ರನ್ ​​ಗಳಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 2016ರಲ್ಲಿ ಅಡಿಲೇಡ್​​​ನಲ್ಲಿ ಅಜೇಯ 90 ರನ್ ​ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​​ನ ಕೆ.ವಿಲಿಯಮ್ಸ್​ 4 ಓವರ್​​ಗಳಲ್ಲಿ ಬರೋಬ್ಬರಿ 60 ರನ್​ ನೀಡಿ ಅತಿ ದುಬಾರಿ ಬೌಲರ್​ ಎಂದು ಎನ್ನಿಸಿಕೊಂಡರು.

ಕೊಹ್ಲಿ ಬ್ಯಾಟಿಂಗ್​ ವೈಖರಿ

ರೋಹಿತ್​ ಹಿಂದಿಕ್ಕಿದ ವಿರಾಟ್

ಟಿ-20 ಕ್ರಿಕೆಟ್​​ನಲ್ಲಿ ಹಿಟ್​ಮ್ಯಾನ್​​ 2539ರನ್​ಗಳಿಕೆ ಮಾಡಿ ಮೊದಲ ಅತಿಹೆಚ್ಚು ರನ್​ಗಳಿಕೆ ಮಾಡಿರುವ ಪ್ಲೇಯರ್​ ಆಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ 94ರನ್​ಗಳಿಕೆ ಮಾಡಿರುವ ಕೊಹ್ಲಿ ಹಿಟ್​ಮ್ಯಾನ್​ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದು ಟಿ-20ಯಲ್ಲಿ 2544ರನ್​ಗಳಿಸಿದ್ದಾರೆ. ಇದೀಗ ಟಿ20ಯಲ್ಲಿ ರೋಹಿತ್​ 22 ಅರ್ಧಶತಕ ಗಳಿಸಿದ್ರೆ, ವಿರಾಟ್​​ 23 ಅರ್ಧಶತಕ ಗಳಿಸಿದ್ದಾರೆ.

ಕೊಹ್ಲಿ-ಕೆಎಲ್​ ಬ್ಯಾಟಿಂಗ್​ ವೈಖರಿ

ಟೀಂ ಇಂಡಿಯಾದ ಈ ಅಮೋಘ ಸಾಧನೆಯನ್ನು ವೆಸ್ಟ್‌ ಇಂಡೀಸ್ ಕ್ರಿಕೆಟ್ ದಂತಕತೆ ಸರ್ ವಿವಿಯನ್‌ ರಿಚರ್ಡ್ಸನ್‌ ಟ್ವೀಟ್ ಮೂಲಕ ಕೊಂಡಾಡಿದ್ದಾರೆ. ಇನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20ಯಲ್ಲಿ 23ನೇ ಅರ್ಧಶತಕ ಸಿಡಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

Last Updated : Dec 6, 2019, 11:49 PM IST

ABOUT THE AUTHOR

...view details