ಕರ್ನಾಟಕ

karnataka

ETV Bharat / bharat

ಇಸ್ರೋ ಸಾಧನೆಗೆ ಕ್ರಿಕೆಟ್​ ತಾರೆಯರ ಸಲಾಂ... ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ ಕೊಹ್ಲಿ,ಸೆಹ್ವಾಗ್​!

ಚಂದ್ರಯಾನ 2 ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಅದರ ಸಾಧನೆಗೆ ಟೀಂ ಇಂಡಿಯಾ ಕ್ರಿಕೆಟರ್ಸ್​ ಸೆಲ್ಯೂಟ್​​ ಹೊಡೆದಿದ್ದಾರೆ.

By

Published : Jul 22, 2019, 6:23 PM IST

ವಿರಾಟ್​ ಕೊಹ್ಲಿ

ನವದೆಹಲಿ:ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಇಸ್ರೋ ಸಾಧನೆಗೆ ಇದೀಗ ಕ್ರಿಕೆಟ್​​ ತಾರೆಯಲು ಸಲಾಂ ಎಂದಿದ್ದಾರೆ.

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸೇರಿದಂತೆ ಅನೇಕರು ಇಸ್ರೋ ಸಾಧನೆಯನ್ನ ಟ್ವೀಟ್​ ಮೂಲಕ ಕೊಂಡಾಡಿದ್ದಾರೆ.

ಇದೊಂದು ಐತಿಹಾಸಿಕ ಕ್ಷಣ,ಇಡಿ ದೇಶವೇ ಹೆಮ್ಮೆ ಪಡುವಂತೆ ಇಸ್ರೋ ಮಾಡಿದ್ದು, ಚಂದ್ರಯಾನ 2 ಯಶಸ್ವಿಯಾಗಿ ಉಡಾವಣೆಗೊಂಡಿದೆ, ಜೈ ಹಿಂದ್​ ಎಂದು ಟ್ವೀಟ್​ ಮಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ಟೆಸ್ಟ್​ ಪ್ಲೇಯರ್​​ ವಿವಿಎಸ್​ ಲಕ್ಷ್ಮಣ್​ ಕೂಡ ಟ್ವೀಟ್​ ಮಾಡಿದ್ದು, ಚಂದ್ರಯಾನ ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕೆ ಅಭಿನಂದನೆಗಳು ಎಂದಿದ್ದಾರೆ.

ಐತಿಹಾಸಿಕ ಹಾಗೂ ಇಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ ಸಾಧನೆಗೆ ಅಭಿನಂದನೆಗಳು ಎಂದು ಚೇತೇಶ್ವರ್​ ಪೂಜಾರಾ ಬರೆದುಕೊಂಡಿದ್ದಾರೆ.

ಇಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ ಸದಸ್ಯರಿಗೆ ಧನ್ಯವಾದಗಳು ಎಂದು ಶಿಖರ್​ ಧವನ್​ ಬರೆದುಕೊಂಡಿದ್ದು, ವಿರೇಂದ್ರ ಸೆಹ್ವಾಗ್​ ಕೂಡ ಚಂದ್ರಯಾನ2 ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕೆ ಅಭಿನಂದನೆಗಳು ಎಂದಿದ್ದಾರೆ.

ABOUT THE AUTHOR

...view details