ಕರ್ನಾಟಕ

karnataka

ETV Bharat / bharat

ನೀರಿಗಿಳಿದ ಬಾಲಕಿ ಹಿಡಿದೆಳೆದ ಶ್ವಾನ... ಮೂಕಪ್ರಾಣಿಯ ಸಮಯಪ್ರಜ್ಞೆಗೆ ನೆಟ್ಟಿಗರ ಫುಲ್​ಮಾರ್ಕ್ಸ್..! - ಚೆಂಡು

ಹದಿನಾರು ಸೆಕೆಂಡ್​ ಅವಧಿಯ ವಿಡಿಯೋದಲ್ಲಿ ಪುಟ್ಟ ಮಗುವೊಂದು ನೀರಲ್ಲಿ ಬಿದ್ದಿರೋ ಚೆಂಡನ್ನು ಎತ್ತಲು ಹೋಗುತ್ತದೆ. ಅಪಾಯದ ಮುನ್ಸೂಚನೆ ಅರಿತ ಮೂಕಪ್ರಾಣಿ ಹಿಂಬದಿಯಿಂದ ಮಗುವಿನ ಬಟ್ಟೆ ಎಳೆದು ಕೊಂಚ ಹಿಂದಕ್ಕೆ ಕರೆ ತರುತ್ತದೆ. ನಂತರ ನಾಯಿಯೇ ನೀರಿಗಿಳಿದು ಚೆಂಡು ತಂದು ಬಾಲಕಿಗೆ ನೀಡುತ್ತದೆ.

ಶ್ವಾನ

By

Published : Jun 18, 2019, 4:21 PM IST

ನವದೆಹಲಿ:ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಈ ಪ್ರಾಣಿಯ ನಿಯತ್ತಿನ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಿರುತ್ತವೆ. ಇಂತಹುದ್ದೇ ಒಂದು ವಿಡಿಯೋ ಇದೀಗ ನೆಟ್ಟಿಗರಿಂದ ಭಾರಿ ಪ್ರಶಂಸೆಗೊಳಗಾಗುತ್ತಿದೆ.

ಹದಿನಾರು ಸೆಕೆಂಡ್​ ಅವಧಿಯ ವಿಡಿಯೋದಲ್ಲಿ ಪುಟ್ಟ ಮಗುವೊಂದು ನೀರಲ್ಲಿ ಬಿದ್ದಿರೋ ಚೆಂಡನ್ನು ಎತ್ತಲು ಹೋಗುತ್ತದೆ. ಅಪಾಯದ ಮುನ್ಸೂಚನೆ ಅರಿತ ಮೂಕಪ್ರಾಣಿ ಹಿಂಬದಿಯಿಂದ ಮಗುವಿನ ಬಟ್ಟೆ ಎಳೆದು ಕೊಂಚ ಹಿಂದಕ್ಕೆ ಕರೆ ತರುತ್ತದೆ. ನಂತರ ನಾಯಿಯೇ ನೀರಿಗಿಳಿದು ಚೆಂಡು ತಂದು ಬಾಲಕಿಗೆ ನೀಡುತ್ತದೆ.

ಅತ್ಯಂತ ಭಾವನಾತ್ಮಕವಾಗಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ನಾಯಿಯ ನಿಯತ್ತು ಹಾಗೂ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಿಗರು ಫುಲ್​ಮಾರ್ಕ್ಸ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಮೂವತ್ತು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ABOUT THE AUTHOR

...view details