ಅಮ್ಮಾ ಎದ್ದೇಳು.. ನನಗೆ ಈ ಕಾಡಲ್ಲಿ ಒಬ್ಬಂಟಿ ಮಾಡಿ ಹೋಗಬೇಡ... ಅಮ್ಮಾ.. ಪ್ಲೀಸ್ ಏಳು.. ಹೀಗೆ ಪುಟ್ಟ ಕಂದಮ್ಮವೊಂದು ತಾಯಿಯ ಶವದ ಬಳಿ ಆರ್ತನಾದ ಹಾಕುತ್ತಿದ್ರೆ ಎಂಥವರ ಕರಳು ಕೂಡಾ ಚುರಕ್ ಎನ್ನದೇ ಇರದು. ತಾಯಿ ಎಂದರೆ ಅದು ತಾಯಿಯೇ. ಅದು ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ, ಪಕ್ಷಿಗಳಗಾಗಲಿ. ಅಮ್ಮನಿಲ್ಲದ ತಬ್ಬಲಿಯ ಕೂಗಿಗೆ ಈ ವಿಡಿಯೋ ಕೈಗನ್ನಡಿಯಂತಿದೆ.
ಹೌದು, ಅದ್ಯಾರೋ ಪಾಪಿಗಳು ದುರಾಸೆಗೆ ತಾಯಿ ಘೇಂಡಾಮೃಗವನ್ನು ಬಲಿ ಪಡೆದಿದ್ದಾರೆ. ಆದರೆ ಮರಿ ಘೇಂಡಾಮೃಗ ತನ್ನ ಅಮ್ಮನನ್ನು ಎದ್ದೇಳಿಸಲು ಪರಿತಪಿಸುತ್ತಿರುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.