ಭುವನೇಶ್ವರ: ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾದಾಗಿನಿಂದಲೂ ರಸ್ತೆ ಸಂಚಾರ ಉಲ್ಲಂಘನೆ ಮಾಡಿ ವಾಹನ ಸವಾರರು ಸಾವಿರಾರು ರೂಪಾಯಿ ದಂಡ ಕಟ್ಟುತ್ತಿದ್ದಾರೆ. ಇದರ ಮಧ್ಯೆ ಒಡಿಶಾದ ಭುವನೇಶ್ವರ ಪೊಲೀಸರು ಮಹತ್ವದ ಯೋಜನೆ ಹಮ್ಮಿಕೊಂಡಿದ್ದಾರೆ.
ರಸ್ತೆ ನಿಯಮ ಉಲ್ಲಂಘಿಸಿದ್ರೆ 500ರೂ ಫೈನ್ ಹಾಕಿ ಪೊಲೀಸ್ರು ನೀಡ್ತಿದ್ದಾರೆ ಫ್ರೀ ಹೆಲ್ಮೆಟ್! - ಟ್ರಾಫಿಕ್ ರೂಲ್ಸ್ ಉಲ್ಲಂಘನೆ
ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರು ಇದೀಗ ಸಿಕ್ಕಾಪಟ್ಟೆ ಹಣ ದಂಡದ ರೂಪದಲ್ಲಿ ಕಟ್ಟುತ್ತಿದ್ದು, ಇದಕ್ಕೆ ಪೂರಕವಾಗಿ ಒಡಿಶಾದ ಭುವನೇಶ್ವರದಲ್ಲಿ ಟ್ರಾಫಿಕ್ ಪೊಲೀಸರು ಹೊಸದೊಂದು ಯೋಜನೆ ಜಾರಿಗೊಳಿಸಿದ್ದಾರೆ.
ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿರುವ ಸವಾರರಿಗೆ ಸಂಚಾರ ಪೊಲೀಸರು 500 ರೂ ದಂಡ ವಿಧಿಸಿ, ಉಚಿತವಾಗಿ ಹೆಲ್ಮೆಟ್ ನೀಡುತ್ತಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಸರಿಯಾಗಿ ರಸ್ತೆ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡುತ್ತಿದ್ದಾರೆ. ಜತೆಗೆ ಸರಿಯಾಗಿ ಸಂಚಾರ ನಿಯಮ ಪಾಲನೆ ಮಾಡುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಧನ್ಯವಾದ ಕಾರ್ಡ್ ನೀಡಲಾಗುತ್ತಿದೆ.
ಕಳೆದ ತಿಂಗಳಿದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದಾಗಿನಿಂದಲೂ ಪ್ರತಿದಿನ ಸಾವಿರಾರು ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತಿದ್ದು, ಅವರಿಗೆ ಪೊಲೀಸರು ಸಾವಿರಾರು ರೂಪಾಯಿ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಒಡಿಶಾ ಪೊಲೀಸರು ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ ಎಂದು ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.