ಮುಂಬೈ (ಮಹಾರಾಷ್ಟ್ರ):ಬಾಂದ್ರಾದಲ್ಲಿ ವಲಸಿಗರನ್ನು ಒಟ್ಟುಗೂಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ವಿನಯ್ ದುಬೆ ಅವರನ್ನು ಪೊಲೀಸ್ ವಿಚಾರಣೆ ಪೂರ್ಣಗೊಳಿಸಿದ ನಂತರ ಮುಂಬೈ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ವಲಸಿಗರಲ್ಲಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಚೋದಿಸಿದ ಆರೋಪದ ಮೇಲೆ ದುಬೆಯನ್ನು ವಶಕ್ಕೆ ಪಡೆಯಲಾಗಿದೆ.
ದುಬೆ ವಿರುದ್ಧ ಸೆಕ್ಷನ್ 117, 153 ಎ, 188, 269 ಹಾಗೂ ಏಪ್ರಿಲ್ 18 ರಂದು ಆಂದೋಲನ ನಡೆಸುವ ಬೆದರಿಕೆ ಹಾಕಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3ರ 270 (ಮಾರಣಾಂತಿಕ ಕ್ರಿಯೆ ಜೀವಕ್ಕೆ ಅಪಾಯಕಾರಿ) ಮತ್ತು 505-(2 ವರ್ಗಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಪ್ರಕರಣಗಳು ದಾಖಲಾಗಿವೆ.
ಏಪ್ರಿಲ್ 14 ರಂದು ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ 1,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಬಾಂದ್ರಾದ ರೈಲ್ವೆ ನಿಲ್ದಾಣದ ಹೊರಗೆ ಜಮಾಯಿಸಿ, ತಮ್ಮ ಸ್ವಂತ ಊರುಗಳಿಗೆ ಮರಳಲು ಸಾರಿಗೆ ಸೌಲಭ್ಯವನ್ನು ಕೋರಿ ಪ್ರತಿಭಟಿಸಿದ್ದರು.