ಕರ್ನಾಟಕ

karnataka

ಸಿಡಿಲು ಬಡಿದವರನ್ನು ಸಗಣಿ ರಾಶಿಯಲ್ಲಿ ಹೂತ ಗ್ರಾಮಸ್ಥರು.. ಇಬ್ಬರು ಬಲಿ

ಸುಟ್ಟ ಗಾಯಗಳನ್ನು ಗುಣಪಡಿಸುವ ಶಕ್ತಿ ಸಗಣಿಗಿದೆ ಎಂದು ಸಿಡಿಲು ಬಡಿದು ಗಾಯಗೊಂಡವರನ್ನು ಸಗಣಿ ರಾಶಿಯಲ್ಲಿ ಮುಚ್ಚಲಾಗಿತ್ತು. ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

By

Published : Jun 29, 2020, 4:54 PM IST

Published : Jun 29, 2020, 4:54 PM IST

Updated : Jun 29, 2020, 5:54 PM IST

villagers-covered-injured-people-of-lightning-with-cow-dung-in-raigarh
ಸಿಡಿಲು ಹೊಡೆದವರನ್ನು ಸಗಣಿ ರಾಶಿಯಲ್ಲಿ ಮುಚ್ಚಿದ ಹಳ್ಳಿಗರು!...ಆಮೇಲೆ?

ಛತ್ತೀಸ್​ಗಢ: ಸಿಡಿಲು ಬಡಿದು ಗಾಯಗೊಂಡವರನ್ನು ಗುಣಪಡಿಸಲೆಂದು ಮೂವರನ್ನು ದನದ ಸಗಣಿ ರಾಶಿಯಲ್ಲಿ ಹೂತಿದ್ದು, ಇದೀಗ ಇವರಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಛತ್ತೀಸಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಸುನಿಲ್​ ಸಾಯಿ (22) ಹಾಗೂ ಚಂಪಾ ರಾವತ್​ ಮೃತ ವ್ಯಕ್ತಿಗಳು. ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಸೇರಿದಂತೆ ಮೂವರನ್ನು ತಲೆ ಮಾತ್ರ ಹೊರಗೆ ಬಿಟ್ಟು ಸಗಣಿ ರಾಶಿಯಲ್ಲಿ ಗ್ರಾಮಸ್ಥರು ಹೂತಿದ್ದರು. ಹೆಚ್ಚು ಕಾಲ ಕಾದರೂ ಅವರ ಸ್ಥಿತಿ ಸುಧಾರಿಸದಿದ್ದಾಗ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಮೂವರಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸುಟ್ಟ ಗಾಯಗಳನ್ನು ಗುಣಪಡಿಸುವ ಶಕ್ತಿ ಸಗಣಿಗಿದೆ ಎಂದು ಗ್ರಾಮಸ್ಥರು ನಂಬಿದ್ದರು. ಹೀಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲಾಗಿ ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಗಣಿ ರಾಶಿಯಲ್ಲಿ ಹೂತಿದ್ದಾರೆ. ಪರಿಣಾಮ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೋರ್ವ ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಶ್‌ಪುರದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರಾಜೇಂದ್ರ ಪರಿಹಾರ್ ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಿಯಮಗಳ ಪ್ರಕಾರ ಸಿಡಿಲು ಬಡಿದು ಸತ್ತವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Jun 29, 2020, 5:54 PM IST

ABOUT THE AUTHOR

...view details