ಕರ್ನಾಟಕ

karnataka

ETV Bharat / bharat

ವಿಶ್ವ ವಾಣಿಜ್ಯ ಕಟ್ಟಡದ ಎತ್ತರದಷ್ಟು ದೂರದಲ್ಲಿದ್ದಾಗ ವಿಕ್ರಂ ಸಂಪರ್ಕ ಕಳೆದುಕೊಂಡಿತು! - ಇಸ್ರೋ ವಿಜ್ಞಾನಿಗಳು

ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್​​ ಚಂದಿರನ ಅಂಗಳ ತಲುಪಲು 400 ಮೀಟರ್​ ದೂರದಲ್ಲಿದ್ದಾಗ ಗ್ರೌಂಡ್‌ ಸ್ಟೇಷನ್‌ನಿಂದ ಸಂಪರ್ಕ ಕಳೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ಚಂದ್ರಯಾನ-2

By

Published : Sep 11, 2019, 5:32 PM IST

Updated : Sep 11, 2019, 5:46 PM IST

ಹೈದರಾಬಾದ್​:ಚಂದ್ರಯಾನ-2 ನೌಕೆಯ ವಿಕ್ರಂ ಲ್ಯಾಂಡರ್‌ ಶಶಿಯ ಅಂಗಳಕ್ಕೆ ಸೆಪ್ಟೆಂಬರ್​​ 7ರಂದು ಇಳಿಯಲು 2.1 ಕಿಲೋಮೀಟರ್​​ ದೂರದಲ್ಲಿದ್ದಾಗ ಭೂಮಿಯಿಂದ ಸಂಪರ್ಕ ಕಳೆದುಕೊಂಡಿತು. ಇದಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ.

ವಿಕ್ರಂ ಲ್ಯಾಂಡರ್​​​

ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿಕ್ರಂ ಲ್ಯಾಂಡರ್​​​ 2.1 ಕಿ.ಮೀಟರ್​ ಅಲ್ಲ, ಬದಲಿಗೆ ಕೇವಲ 400 ಮೀಟರ್​​​ ದೂರದಲ್ಲಿದ್ದಾಗ ಭೂಮಿಯಿಂದ ಸಂಪರ್ಕ ಕಳೆದುಕೊಂಡಿದೆ. ಲ್ಯಾಂಡರ್​​ ಚಂದ್ರನ ಅಂಗಳದಲ್ಲಿ ಇಳಿಯಲು ಹಾಕಲಾಗಿದ್ದ ಗ್ರೀನ್​ ಲೈನ್​ ಕೇವಲ 400 ಮೀಟರ್​ ದೂರದಲ್ಲಿದ್ದಾಗಲೇ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಇಸ್ರೋ ವಿಜ್ಞಾನ ಕೇಂದ್ರ

ಕೊನೆಯ ಹಂತದಲ್ಲಿ ವಿಕ್ರಂ ಲ್ಯಾಂಡರ್ ಏಕಾಏಕಿಯಾಗಿ ಸಂಪರ್ಕ ಕಳೆದುಕೊಂಡಿದ್ದರಿಂದ ಭಾರತಕ್ಕೆ ಸ್ವಲ್ಪ ಮಟ್ಟದ ಹಿನ್ನೆಡೆಯಾಗಿದ್ದು, ಇದೀಗ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ನಿರಂತರ ಶ್ರಮ ಹಾಕುತ್ತಿದ್ದಾರೆ. ಚಂದ್ರನ ಅಂಗಳದಲ್ಲಿ ಆರ್ಬಿಟರ್​ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿದ್ದು ಅದರ ಸಹಾಯದಿಂದ ಚಂದ್ರನ ಅಧ್ಯಯನ ನಡೆಸಲಾಗುತ್ತಿದೆ.

ಚಂದಿರನ ದಕ್ಷಿಣ ಧ್ರುವಕ್ಕೆ ಕಾಲಿಡುವ ಇಸ್ರೋ ಯೋಜನೆ ಬಗ್ಗೆ ಈಗಾಗಲೇ ವಿವಿಧ ದೇಶಗಳ ಬಾಹ್ಯಾಕಾಶ ​ಸಂಸ್ಥೆಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಸ್ರೋ ಸಾಧನೆ ಮೆಚ್ಚುವಂಥದ್ದು, ಯೋಜನೆ ಶೇ.95ರಷ್ಟು ಯಶ ಕಂಡಿದೆ ಎಂದು ಹೇಳಿದ್ದಾರೆ.

Last Updated : Sep 11, 2019, 5:46 PM IST

ABOUT THE AUTHOR

...view details