ಲಕ್ನೋ(ಉತ್ತರ ಪ್ರದೇಶ): ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯ ತಾಯಿ ಸರಳಾ ದೇವಿ ಬುಧವಾರ ತನ್ನ ಕಿರಿಯ ಮಗ ದೀಪ್ ಪ್ರಕಾಶ್ ದುಬೆಯಲ್ಲಿ ಆತ ಎಲ್ಲೇ ಇದ್ದರೂ ಬಂದು ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
ಶರಣಾಗು ಅಥವಾ ಕಠೋರ ವಿಧಿ ಅನುಭವಿಸು: ವಿಕಾಸ್ ದುಬೆ ತಮ್ಮನಿಗೆ ತಾಯಿಯ ಮನವಿ - ಉತ್ತರ ಪ್ರದೇಶ ಲಕ್ನೋ ಪೊಲೀಸ್
ಜುಲೈ 3 ರಂದು ನಡೆದ ಕಾನ್ಪುರ್ ಎನ್ಕೌಂಟರ್ ನಂತರ ದೀಪ್ ಪ್ರಕಾಶ್ ಪರಾರಿಯಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ಲಕ್ನೋ ಪೊಲೀಸರು 20,000 ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೀಪ್ ಪ್ರಕಾಶ್, ದಯವಿಟ್ಟು ಮುಂದೆ ಬಂದು ಶರಣಾಗು, ಇಲ್ಲದಿದ್ದರೆ ಪೊಲೀಸರು ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಕೊಂದುಬಿಡುತ್ತಾರೆ. ನೀನು ಬಂದು ಶರಣಾದರೆ ಪೊಲೀಸರು ನಿನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಅವರೇ ನಿನ್ನನ್ನು ರಕ್ಷಿಸುತ್ತಾರೆ. ನಿನ್ನ ಅಣ್ಣನಿಂದಾಗಿ ನೀನು ಅಡಗಿಕೊಳ್ಳುವ ಅವಶ್ಯಕತೆಯಿಲ್ಲ. ಕನಿಷ್ಠ ಪಕ್ಷ ಫೋನ್ ಮೂಲಕವಾದರೂ ನನ್ನನ್ನು ಸಂಪರ್ಕಿಸು" ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.
ಜುಲೈ 3 ರಂದು ನಡೆದ ಕಾನ್ಪುರ್ ಎನ್ಕೌಂಟರ್ ನಂತರ ದೀಪ್ ಪ್ರಕಾಶ್ ಪರಾರಿಯಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ 20,000 ನಗದು ಬಹುಮಾನ ಘೋಷಿಸಲಾಗಿದೆ ಎಂದು ಉತ್ತರಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.