ಮುಂಬೈ: ಭಯಾನಕ ಕ್ರಿಮಿನಲ್ ವಿಕಾಸ ದುಬೆ ಬಂಟ ಹಾಗೂ ಆತನ ಚಾಲಕನಿಗೆ ಥಾಣೆ ಎಟಿಎಸ್ ನ್ಯಾಯಾಲಯ ಜುಲೈ 21ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರನ್ನ ತಾಲೋಜ್ ಜೈಲಿನಲ್ಲಿ ಇರಿಸಲಾಗಿದೆ.
ವಿಕಾಸ ದುಬೆಯ ಮತ್ತೊಬ್ಬ ಬಲಗೈ ಬಂಟ ಅರೆಸ್ಟ್ : ಜುಲೈ 21ರವರೆಗೆ ನ್ಯಾಯಾಂಗ ಬಂಧನ - ತಾಲೋಜ್ ಜೈಲ
ಕಾನ್ಪುರದ ಶೂಟೌಟ್ ಮಾಸ್ಟರ್ ಮೈಂಡ್ ವಿಕಾಸ್ ದುಬೆ ಅವರ ಬೆಂಬಲಿಗ ಗುಡ್ಡನ್ ತ್ರಿವೇದಿ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು. ಈ ಇಬ್ಬರ ಬಂಧನದ ಬಳಿಕ ಮುಂಬೈ ಪೊಲೀಸರು ಇವರನ್ನ ಥಾಣೆ ಎಟಿಎಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
![ವಿಕಾಸ ದುಬೆಯ ಮತ್ತೊಬ್ಬ ಬಲಗೈ ಬಂಟ ಅರೆಸ್ಟ್ : ಜುಲೈ 21ರವರೆಗೆ ನ್ಯಾಯಾಂಗ ಬಂಧನ ವಿಕಾಸ ದುಬೆ](https://etvbharatimages.akamaized.net/etvbharat/prod-images/768-512-8002887-573-8002887-1594607420971.jpg)
ವಿಕಾಸ ದುಬೆ
ಕಾನ್ಪುರದ ಶೂಟೌಟ್ ಮಾಸ್ಟರ್ ಮೈಂಡ್ ವಿಕಾಸ್ ದುಬೆ ಅವರ ಬೆಂಬಲಿಗ ಗುಡ್ಡನ್ ತ್ರಿವೇದಿ ಹಾಗೂ ಆತನ ಕಾ್ರು ಚಾಲಕನನ್ನ ಮುಂಬೈನಲ್ಲಿ ಬಂಧಿಸಲಾಗಿತ್ತು. ಈ ಇಬ್ಬರ ಬಂಧನದ ಬಳಿಕ ಮುಂಬೈ ಪೊಲೀಸರು ಇವರನ್ನ ಥಾಣೆ ಎಟಿಎಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಗುಡ್ಡನ್ ತ್ರಿವೇದಿ ಮತ್ತು ಅವರ ಚಾಲಕನನ್ನು ಜುಲೈ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ವಿಕಾಸ್ ದುಬೆಯ ಪ್ರಮುಖ ಬಲಗೈ ಬಂಟನಲ್ಲಿ ಗುಡ್ಡನ್ ತ್ರಿವೇದಿ ಸಹ ಒಬ್ಬನಾಗಿದ್ದ.