ನವದೆಹಲಿ:ದರೋಡೆಕೋರ ವಿಕಾಸ್ ದುಬೆ ಎನ್‌ಕೌಂಟರ್ ಪ್ರಕರಣದ ತನಿಖೆಗೆ ನೇಮಕ ಮಾಡಿರುವ ವಿಶೇಷ ತನಿಖಾ ಆಯೋಗದಿಂದ ಮಾಜಿ ಪೊಲೀಸ್ ಮಹಾನಿರ್ದೇಶಕ ಕೆ.ಎಲ್.ಗುಪ್ತಾ, ಶಶಿ ಕಾಂತ್ ಅಗರ್ವಾಲ್ ಮತ್ತು ಎಸ್‌ಐಟಿಯಿಂದ ರವೀಂದ್ರ ಗೌರ್ ಅವರನ್ನು ಕೈ ಬಿಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ವಿಕಾಸ್ ದುಬೆ ಎನ್‌ಕೌಂಟರ್ ತನಿಖೆ: ಆಯೋಗದ ಸದಸ್ಯರನ್ನ ಬದಲಿಸಲು ಮತ್ತೊಂದು ಅರ್ಜಿ - ತನಿಖಾಧಿಕಾರಿಗಳನ್ನು ಬದಲಿಸಲು ಮನವಿ ಸಲ್ಲಿಕೆ
ಉತ್ತರಪ್ರದೇಶದ ಮಾಜಿ ಡಿಜಿಪಿ ವಿಶೇಷ ತನಿಖಾ ಆಯೋಗದ ಸದಸ್ಯ ಸ್ಥಾನದಿಂದ ಕೈಬಿಡಬೇಕು ಎಂದು ಮತ್ತೊಂದು ಅರ್ಜಿಯನ್ನ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿರುವ ಘನಶ್ಯಾಮ್ ಉಪಾಧ್ಯಾಯ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
sc
ಮಾಜಿ ಡಿಜಿಪಿ ಗುಪ್ತಾ ಅವರ ಬದಲಿಗೆ ಇತರ ಮಾಜಿ ಡಿಜಿಪಿಗಳನ್ನ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿರುವ ಘನಶ್ಯಾಮ್ ಉಪಾಧ್ಯಾಯ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಮಾಜಿ ಡಿಜಿಪಿಗಳಾದ ಐಸಿ ದ್ವಿವೇದಿ, ಎಸ್.ಜವೀದ್ ಅಹ್ಮದ್, ಪ್ರಕಾಶ್ ಸಿಂಗ್ ಅವರ ಹೆಸರನ್ನು ಉಪಾಧ್ಯಾಯ ಸೂಚಿಸಿದ್ದಾರೆ.