ಕರ್ನಾಟಕ

karnataka

ETV Bharat / bharat

ಪೊಲಿಟಿಕಲ್‌ ಪಂಚ್ ಮಿಸ್‌! ಚುನಾವಣೆ ಸೋಲಿನ ಜತೆ ಸರ್ಕಾರಿ ಹುದ್ದೆ ಕಳ್ಕೊಂಡ ವಿಜೇಂದರ್​ ಸಿಂಗ್​​.. - undefined

ಖ್ಯಾತ ಬಾಕ್ಸರ್ ವಿಜೇಂದರ್‌ ಸಿಂಗ್‌ ದೆಹಲಿಯ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನನುಭವಿಸುವುದರ ಜೊತೆಗೆ ಡಿಎಸ್​​ಪಿ ಹುದ್ದೆಯನ್ನೂ ಕಳೆದುಕೊಂಡಿದ್ದಾರೆ.

ವಿಜೇಂದರ್‌ ಸಿಂಗ್‌

By

Published : May 27, 2019, 9:25 AM IST

Updated : May 27, 2019, 9:33 AM IST

ನವದೆಹಲಿ :​ಒಲಿಂಪಿಕ್ ಪದಕ ವಿಜೇತ ಹಾಗೂ ಖ್ಯಾತ ಬಾಕ್ಸರ್ ವಿಜೇಂದರ್‌ ಸಿಂಗ್‌ ದೆಹಲಿಯ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಚುನಾವಣೆಯಲ್ಲಿ 1 ಲಕ್ಷದ 64 ಸಾವಿರದ 613 ಮತಗಳನ್ನು ಪಡೆಯುವ ಮೂಲಕ ಸೋಲನ್ನನುಭವಿಸಿದ್ದಾರೆ.

ಟಿಕೆಟ್​ ಸಿಗುವ ಮೊದಲೇ ಡಿಎಸ್​ಪಿ ನೌಕರಿಗೆ ರಾಜೀನಾಮೆ :

ವಿಜೇಂದರ್ ಸಿಂಗ್​ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾದ ನಂತರ ಅವರಿಗೆ ಟಿಕೆಟ್​ ನೀಡಲು ಪಕ್ಷ ನಿರ್ಧರಿಸಿತ್ತು ಎಂದು ಹೇಳಲಾಗ್ತಿದೆ. ಆದರೆ, ಟಿಕೆಟ್​​ ನೀಡುವ ಮೊದಲೇ ವಿಜೇಂದರ್​ ಸಿಂಗ್​​ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2008ರಲ್ಲಿ ವಿಜೇಂದರ್​ ಸಿಂಗ್​ ಅವರ ಬಾಕ್ಸಿಂಗ್​​ನಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಹರಿಯಾಣದ ಮಾಜಿ ಸಿಎಂ ಭುಪೇಂದರ್‌ ಸಿಂಗ್​​ ಅವರು ಪೊಲೀಸ್​ ಇಲಾಖೆಯಲ್ಲಿ ಡಿಎಸ್​ಪಿ ಹುದ್ದೆ ನೀಡಿದ್ದರು. ಆದರೆ, ನಿಯಮಗಳ ಪ್ರಕಾರ ಸರ್ಕಾರಿ ಕೆಲಸದಲ್ಲಿರುವ ವ್ಯಕ್ತಿ ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಮೊದಲು ಹುದ್ದೆಗೆ ರಾಜೀನಾಮೆ ನೀಡಬೇಕು. ಹಾಗಾಗಿ ವಿಜೇಂದರ್​ ಸಿಂಗ್​ ಟಿಕೆಟ್​ ಸಿಗುವ ಮೊದಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಯಾರು?

ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಬಿಧುಡಿ, ಆಮ್ ಆದ್ಮಿ ಪಾರ್ಟಿಯ ರಾಘವ್ ಚಧಾ ವಿರುದ್ಧ ಕಾಂಗ್ರೆಸ್​​ನಿಂದ ವಿಜೇಂದರ್ ಸಿಂಗ್ ಚುನಾವಣೆಗೆ ನಿಂತಿದ್ದರು. ಇದರಲ್ಲಿ ರಮೇಶ್ ಬಿಧುಡಿ ರಾಜಕೀಯದಲ್ಲಿ ಹಿರಿಯ ಮುಖಂಡರಾಗಿದ್ದರು. ಮತ್ತೊಂದೆಡೆ ಆಮ್ ಆದ್ಮಿ ಪಾರ್ಟಿಯ ರಾಘವ್ ಚಧಾ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದದಾರೂ, 2014ರಿಂದ ಆಮ್​ ಆದ್ಮಿ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ವಿಜೇಂದರ್​ ಸಿಂಗ್​ ಅವರಿಗೆ ರಾಜಕೀಯದಲ್ಲಿ ಹಿಡಿತವಿರಲಿಲ್ಲ ಹಾಗೂ ಅವರು ಎಂದಿಗೂ ಪಕ್ಷದಲ್ಲಿ ಪಾಲ್ಗೊಂಡಿರಲಿಲ್ಲ. ಇದೂ ಕೂಡ ಒಂದು ರೀತಿ ಅವರ ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Last Updated : May 27, 2019, 9:33 AM IST

For All Latest Updates

TAGGED:

ABOUT THE AUTHOR

...view details