ಕರ್ನಾಟಕ

karnataka

ETV Bharat / bharat

ಕೊರೊನಾ ಶಂಕಿತ ಆಸ್ಪತ್ರೆಯಿಂದಲೇ ನಾಪತ್ತೆ: ಪತಿ ಹುಡುಕಿಕೊಡುವಂತೆ ಪತ್ನಿ ದೂರು

ಸರ್ಕಾರಿ ಆಸ್ಪತ್ರೆಯಿಂದ ಕೋವಿಡ್ -19 ಶಂಕಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ. ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

missing
missing

By

Published : Jul 3, 2020, 10:04 AM IST

ವಿಜಯವಾಡ (ಆಂಧ್ರಪ್ರದೇಶ): ವಿಜಯವಾಡದ ಸರ್ಕಾರಿ ಆಸ್ಪತ್ರೆಯಿಂದ 63 ವರ್ಷದ ಕೋವಿಡ್ -19 ಶಂಕಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ.

ವಸಂತ ರಾವ್ (63) ಅಸ್ತಮಾ ಮತ್ತು ಬಿಕ್ಕಳಿಸುವಿಕೆಯಿಂದ ಬಳಲುತ್ತಿದ್ದರು. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ನಾಪತ್ತೆಯಾದ ವ್ಯಕ್ತಿಯ ಪತ್ನಿ ಧನಲಕ್ಷ್ಮಿ ಹೇಳಿದ್ದಾರೆ.

"ನನ್ನ ಪತಿಗೆ ಬಳಲಿಕೆ ಇದ್ದುದರಿಂದ, ನಾನು ಅವರ ಜೊತೆಗೆ ಇರುವಂತೆ ನಿರ್ಧರಿಸಿ ನೋಂದಣಿಗಾಗಿ ಅವರ ವಿವರಗಳನ್ನು ನೀಡಿದೆ. ನೋಂದಣಿಗಾಗಿ, ಅವರು ಆಧಾರ್ ಸಂಖ್ಯೆಯನ್ನು ಕೇಳುತ್ತಿದ್ದರು. ನಾನು ಮರುದಿನ ಆಧಾರ್ ಸಂಖ್ಯೆ ನೀಡುವುದಾಗಿ ತಿಳಿಸಿದೆ. ಅದಕ್ಕೆ ಅವರು ಒಪ್ಪಿಕೊಂಡರು. ಈ ನಡುವೆ ಇಬ್ಬರು ಮಹಿಳೆಯರು ಬಂದು ನನ್ನ ಪತಿಯನ್ನು ಗಾಲಿ ಕುರ್ಚಿಯಲ್ಲಿ ಕರೆದೊಯ್ದರು. ಅವರು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕೇಳಿದಾಗ, ಅವರ ಪಲ್ಸ್ ರೇಟ್ ಕಡಿಮೆಯಾಗುತ್ತಿದ್ದು, ಅವರಿಗೆ ತಕ್ಷಣ ಆಮ್ಲಜನಕ ನೀಡಬೇಕು ಎಂದು ಹೇಳಿದರು. ನಾನು ಅವನೊಂದಿಗೆ ಬರುತ್ತೇನೆ ಎಂದು ಹೆಳಿದಾಗ ಅವರು ಅನುಮತಿಸಲಿಲ್ಲ. ನಾನು ಸ್ವಲ್ಪ ಸಮಯದವರೆಗೆ ಹೊರಗೆ ಕಾಯಲು ನಿರ್ಧರಿಸಿದೆ"

"ಕೆಲವು ಗಂಟೆಗಳು ಕಳೆದಾಗ ನಾನು ಸಿಬ್ಬಂದಿಯನ್ನ ವಿಚಾರಸಿದೆ. ಆದರೆ, ಅವರು ನನಗೆ ಯಾವುದೇ ಮಾಹಿತಿ ನೀಡಲಿಲ್ಲ. ಸಂಜೆ 5 ಗಂಟೆ ಸುಮಾರಿಗೆ ಅವರು ನನ್ನನ್ನು ಮನೆಗೆ ಹೋಗಿ, ನಾಳೆ ಬರುವಾಗ ಆಧಾರ್ ಕಾರ್ಡ್ ನಂಬರ್ ತರಲು ಹೇಳಿದರು. ಅದರಂತೆ ನಾನು ಜೂನ್ 25ರಂದು ಆಧಾರ್ ಕಾರ್ಡ್‌ನೊಂದಿಗೆ ಆಸ್ಪತ್ರೆಗೆ ಹೋಗಿದ್ದೆ. ಆದರೆ ಅಲ್ಲಿ ನನ್ನ ಪತಿ ಇರಲಿಲ್ಲ"

"ರಾತ್ರಿ 8 ಗಂಟೆಯವರೆಗೆ ಇಡೀ ಆಸ್ಪತ್ರೆಯಲ್ಲಿ ನಾನು ಅವರನ್ನು ಹುಡುಕಿದರೂ ನನ್ನ ಪತಿ ನನಗೆ ಸಿಗಲಿಲ್ಲ. ನಾನು ಮತ್ತೆ ಜೂನ್ 26ರಂದು ಆಸ್ಪತ್ರೆಗೆ ಹೋದೆ. ಕಾಣೆಯಾದ ನನ್ನ ಪತಿಯ ಕುರಿತು ಆಸ್ಪತ್ರೆ ಅಧೀಕ್ಷಕಿ ಶೋಭಾ ಅವರನ್ನು ಕೇಳಿದಾಗ, ನಾವು ಕೂಡ ಹುಡುಕುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ" ಎಂದು ನಾಪತ್ತೆಯಾದ ವ್ಯಕ್ತಿಯ ಪತ್ನಿ ಧನಲಕ್ಷ್ಮಿ ಹೇಳಿದ್ದಾರೆ.

ವಿಜಯವಾಡ ಒನ್ ಟೌನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಿ.ವೆಂಕಟೇಶ್ವರಲು ಈ ಕುರಿತು ಮಾತನಾಡಿ, "ನಾವು ವಸಂತ ರಾವ್ ಅವರ ಕಾಣೆಯಾದ ವರದಿಯನ್ನು ಜೂನ್ 29ರಂದು ನೋಂದಾಯಿಸಿದ್ದೇವೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸಿದ್ದೇವೆ. ಗಾಲಿಕುರ್ಚಿಯಲ್ಲಿ ಅವರನ್ನು ಕರೆದುಕೊಂಡು ಹೋಗಲಾಗಿದೆ. ಆದರೆ, ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಮತ್ತು ಅವರು ಆಸ್ಪತ್ರೆಯಲ್ಲಿ ಎಲ್ಲಿಯೂ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ನಾವು ಆಸ್ಪತ್ರೆಯ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ABOUT THE AUTHOR

...view details