ನವದೆಹಲಿ:ನಟಿ, ಮಾಜಿ ಸಂಸದೆ ವಿಜಯಶಾಂತಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ.
ಅಧಿಕೃತವಾಗಿ ಮತ್ತೆ ಬಿಜೆಪಿ ಸೇರಿದ ನಟಿ ವಿಜಯಶಾಂತಿ - ವಿಜಯ್ ಶಾಂತಿ ಪಕ್ಷಾಂತರ
ಬಿಜೆಪಿ ನಾಯಕ ಅರುಣ್ ಸಿಂಗ್, ಭೂಪೇಂದ್ರ ಯಾದವ್ ಮತ್ತು ತೆಲಂಗಾಣದ ಇತರೆ ನಾಯಕರ ಸಮ್ಮುಖದಲ್ಲಿ ನಟಿ, ಮಾಜಿ ಸಂಸದೆ ವಿಜಯಶಾಂತಿ ಬಿಜೆಪಿ ಸೇರಿದ್ದಾರೆ.
ಬಿಜೆಪಿ ನಾಯಕ ಅರುಣ್ ಸಿಂಗ್, ಭೂಪೇಂದ್ರ ಯಾದವ್ ಮತ್ತು ತೆಲಂಗಾಣದ ಇತರೆ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಇದೇ ಕಾರಣಕ್ಕಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಷನ್ ರೆಡ್ಡಿ ನೇತೃತ್ವದಲ್ಲಿ ವಿಜಯಶಾಂತಿ ಅವರು, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಬಿಜೆಪಿ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯಶಾಂತಿ ನಂತರ ಟಿಆರ್ಎಸ್ (ತೆಲಂಗಾಣ ರಾಷ್ಟ್ರ ಸಮಿತಿ)ಗೆ ಸೇರಿಕೊಂಡರು. ಟಿಆರ್ಎಸ್ನಲ್ಲಿ ಹೆಚ್ಚು ದಿನ ಉಳಿಯದ ವಿಜಯಶಾಂತಿ ಬಳಿಕ ತೆಲಂಗಾಣ ರಚನೆಯ ಮೊದಲು ಅಂದ್ರೆ 2014ರಲ್ಲಿ ಕಾಂಗ್ರೆಸ್ ಸೇರಿದ್ರು. ಇದೀಗ ಮತ್ತೆ ಕಾಂಗ್ರೆಸ್ ತೊರೆದು ಮರಳಿ ಮೂಲ ಪಕ್ಷ ಸೇರಿದ್ದಾರೆ.