ಕರ್ನಾಟಕ

karnataka

ETV Bharat / bharat

ಚೋರ್​​​ ಎಂದು ಕರೆಯುವುದನ್ನ ನಿಲ್ಲಿಸಿ, ಕಳ್ಳ ಯಾರೆಂದು ಮೊದಲು ನಿರ್ಧರಿಸಿ: ಮಲ್ಯ ಸಿಡಿಮಿಡಿ - undefined

ಟ್ವೀಟ್​ಗಳಿಂದ ಕೋಪಗೊಂಡು ಮತ್ತೆ ಟ್ವೀಟ್​ ಮಾಡಿರುವ ಮಲ್ಯ, ನನ್ನನ್ನು ಚೋರ್​ ಎಂದು ಕರೆಯುವ ಮಂದಿ, ಕಳೆದ ಒಂದು ವರ್ಷದಿಂದ ಪೂರ್ತಿ ಹಣ ಕೊಡುತ್ತೇನೆಂದರೂ ಪಡೆಯದ ನಿಮ್ಮ ಬ್ಯಾಂಕ್​ಗಳನ್ನೇ ಮೊದಲು ಪ್ರಶ್ನಿಸಿ. ಆಮೇಲೆ ಚೋರ್​ ಯಾರೆಂದು ನಿರ್ಧರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijay Mally

By

Published : Jul 14, 2019, 12:36 PM IST

ನವದೆಹಲಿ:ಭಾರತೀಯ ಬ್ಯಾಂಕ್​ಗಳಿಗೆ ಬಹುಕೋಟಿ ರೂಪಾಯಿ ವಂಚಿಸಿರುವ ಆರೋಪ ಹೊತ್ತಿರುವ ವಿಜಯ್ ಮಲ್ಯ ಇದೀಗ ಟ್ವಿಟ್ಟಿಗರ ವಿರುದ್ಧ ಹರಿಹಾಯ್ದಿದ್ದಾರೆ.

ಖ್ಯಾತ ವೆಸ್ಟ್​ ಇಂಡೀಸ್​ ಕ್ರಿಕೆಟಿಗ ಗ್ರಿಸ್​ ಗೇಲ್ ಜೊತೆಗಿನ ಫೋಟೋವನ್ನು ಪೋಸ್ಟ್​ ಮಾಡಿದ್ದ ಮಲ್ಯ, ನನ್ನ ನೆಚ್ಚಿನ ಗೆಳೆಯ, ಯೂನಿವರ್ಸಲ್ ಬಾಸ್ ಎಂದೆಲ್ಲಾ ಕೊಂಡಾಡಿದ್ದರು.

ಇದಕ್ಕೆ ಟ್ವಿಟ್ಟಿಗರು ಮಲ್ಯರನ್ನು ಚೋರ್​ ಎಂದು ರೀಟ್ವೀಟ್​ ಮಾಡಿದ್ದರು. ಇಂತಹ ಟ್ವೀಟ್​ಗಳಿಂದ ಕೋಪಗೊಂಡು ಮತ್ತೆ ಟ್ವೀಟ್​ ಮಾಡಿರುವ ಮಲ್ಯ, ನನ್ನನ್ನು ಚೋರ್​ ಎಂದು ಕರೆಯುವ ಮಂದಿ, ಕಳೆದ ಒಂದು ವರ್ಷದಿಂದ ಪೂರ್ತಿ ಹಣ ಕೊಡುತ್ತೇನೆಂದರೂ ಪಡೆಯದ ನಿಮ್ಮ ಬ್ಯಾಂಕ್​ಗಳನ್ನೇ ಮೊದಲು ಪ್ರಶ್ನಿಸಿ. ಆಮೇಲೆ ಚೋರ್​ ಯಾರೆಂದು ನಿರ್ಧರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನನ್ನು ಚೋರ್​ ಎಂದು ಕರೆಯುವುದನ್ನು ನಿಲ್ಲಿಸಿ. ಸತ್ಯಾಸತ್ಯತೆಯನ್ನು ಮೊದಲು ಅರಿಯಿರಿ. ನಾನು ಹೇಳುತ್ತಿದ್ದರೂ ನಿಮ್ಮ ಬ್ಯಾಂಕ್​ಗಳೇಕೆ ಪೂರ್ತಿ ಸಾಲದ ಹಣ ಪಡೆಯುತ್ತಿಲ್ಲವೆಂದು ಕೇಳಿ ನೋಡಿ ಎಂದು ಬರೆದುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details